ನವದೆಹಲಿ: ತಬ್ಲೀಗಿ ಜಮಾತ್‌ನಲ್ಲಿ ಭಾಗವಹಿಸಿದ್ದ ಮಲೇಷ್ಯಾದ ಎಂಟು ಪ್ರಜೆಗಳು ಅಧಿಕಾರಿಗಳ ಕಣ್ತಪ್ಪಿಸಿಕ್ವಾಲಾಲಂಪುರಕ್ಕೆ ಹೋಗುವವಿಮಾನವೇರುವಮುನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ಈ ಘಟನೆನಡೆದಿದ್ದು,ಭಾರತದಲ್ಲಿ ಸಿಲುಕಿರುವ ಮಲೇಷ್ಯಾದ ಪ್ರಜೆಗಳನ್ನು ಸ್ಥಳಾಂತರಿಸಲು ಅಲ್ಲಿನ ಸರ್ಕಾರ ಮಲಿಂದೊ ಏರ್ ವಿಮಾನಸಂಸ್ಥೆ ಒಡಿ 203 ವಿಮಾನವನ್ನು ಸಿದ್ಧಗೊಳಿಸಿತ್ತು. ಭಾರತದಿಂದ ಮಲೇಷ್ಯಾಗೆ ಹೊರಡಲು 30 ಮಂದಿ ಪ್ರಯಾಣಿಕರು ಸಿದ್ಧವಾಗಿದ್ದರು. ಈ ಪೈಕಿ 8 ಮಂದಿ ಪ್ರಯಾಣಿಕರುತಬ್ಲೀಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರಾಗಿದ್ದಾರೆ ಎಂದು ಇಮಿಗ್ರೇಷನ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

12.40ಕ್ಕೆ ಹೊರಡಲನುವಾಗಿದ್ದ ದೆಹಲಿ- ಮುಂಬೈ-ಕ್ವಾಲಾಲಂಪುರ ವಿಮಾನದಿಂದ ಅವರನ್ನು ತಕ್ಷಣವೇ ಕೆಳಗಿಳಿಸಿ ಸರ್ಕಾರದ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಅವರನ್ನು ದೆಹಲಿ ಪೊಲೀಸರಿಗೆ ಒಪ್ಪಿಸಲಾಗಿದೆ. ಇನ್ನುಳಿದ22 ಪ್ರಯಾಣಿಕರನ್ನು ಮಲೇಷ್ಯಾ ವಿಮಾನ ಕರೆದೊಯ್ದಿದೆ.

ಪ್ರವಾಸಿ ವೀಸಾದಲ್ಲಿ ಬಂದು ಭಾರತದಲ್ಲಿ ಮಿಷನರಿ ಚಟುವಟಿಕೆ ನಡೆಸುತ್ತಿರುವ ವಿದೇಶಿಯರನ್ನು ಭಾರತ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿದೆ.ಈ ಪೈಕಿ ತಬ್ಲೀಗಿ ಜಮಾತ್‌ನಲ್ಲಿ ಭಾಗವಹಿಸಿದ 960 ಮಂದಿ ವಿದೇಶಿಯರನ್ನು ಕಪ್ಪು ಪಟ್ಟಿಗೆ ಸೇರಿಸಿ ವೀಸಾ ರದ್ದು ಮಾಡಲಾಗಿದೆ.ಆದಾಗ್ಯೂ, ಭಾರತದ ಅಧಿಕಾರಿಗಳ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ ಮಲೇಷ್ಯಾ ಪ್ರಜೆಗಳ ವಿರುದ್ಧ ವಿದೇಶಿ ಕಾಯ್ದೆ ಉಲ್ಲಂಘನೆ ಮತ್ತು ಸಾಂಕ್ರಾಮಿಕ ರೋಗ ಕಾಯ್ದೆ ಪ್ರಕಾರ ಭಾರತೀಯ ದಂಡ ಸಂಹಿತೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ರೀತಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ತಬ್ಲೀಗಿ ಜಮಾತ್‌ನಲ್ಲಿ ಭಾಗವಹಿಸಿದ್ದ 10 ಇಂಡೋನೇಷ್ಯಾ ಪ್ರಜೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ 5 ಮಹಿಳೆಯರಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಸರ್ಕಾರಿ ಅಧಿಕಾರಿಗಳ ಆದೇಶ ಉಲ್ಲಂಘನೆ), 269(ಸಾಂಕ್ರಾಮಿಕ ರೋಗ ಹರಡುವಿಕೆಯ ಬಗ್ಗೆ ನಿರ್ಲಕ್ಷ್ಯ), 270 (ಪ್ರಾಣಕ್ಕೆ ಹಾನಿಯಂಟಾಗುವಂತ ರೋಗ ಹರಡುವಿಕೆ) ಮತ್ತು ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆ 1897ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇವರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಅದೇ ವೇಳೆ ಇವರಿಗೆ ವಾಸ್ತವ್ಯಕ್ಕೆ ಅವಕಾಶ ನೀಡಿದ ನಾಲ್ವರ ವಿರುದ್ಧವೂ ಕೇಸು ದಾಖಲಿಸಲಾಗಿದೆ.ನವೀ ಮುಂಬೈನಲ್ಲಿಯೂ ಇದೇ ರೀತಿಯ ಪ್ರಕರಣ ನಡೆದ್ದು ಫಿಲಿಪ್ಪೈನ್ಸ್‌ನ 10 ಪ್ರಜೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.