ಗುರುವಾರ , ಜನವರಿ 23, 2020
28 °C

ಫಾರ್ಮ್‌ಹೌಸ್‌ನಲ್ಲಿ 70 ಅಡಿ ಮೇಲಿಂದ ಕುಸಿದು ಬಿದ್ದ ಎಲಿವೇಟರ್, 6 ಸಾವು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Representational image

 ಇಂದೋರ್: ಮಧ್ಯಪ್ರದೇಶದ ಖ್ಯಾತ ಉದ್ಯಮಿ ಪುನೀತ್ ಅಗರವಾಲ್ ಅವರ ಫಾರ್ಮ್‌ಹೌಸ್‌ನಲ್ಲಿದ್ದ ಎಲಿವೇಟರ್ ಕುಸಿದು ಬಿದ್ದು, ಪುನೀತ್ ಮತ್ತು ಅವರ ಕುಟುಂಬದ ಐವರು ಸದಸ್ಯರು ಸಾವಿಗೀಡಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸುಮಾರು 70  ಅಡಿ ಮೇಲಿಂದ ಎಲಿವೇಟರ್ ಕುಸಿದು ಬಿದ್ದಿದೆ.

 ಪುನೀತ್ ಅಗರವಾಲ್ , ಅವರ ಮಗಳು ಪಲಕ್ ಅಗರ್‌ವಾಲ್  (27), ಅಳಿಯ  ಪಲಕೇಶ್ ಅಗರವಾಲ್, ಮೊಮ್ಮಗ ನಾವ್ (2) ಮತ್ತು ಸಂಬಂಧಿಗಳಾದ ಗೌರವ್  (40) ಮತ್ತು ಆರ್ಯವೀರ್ (11) ಈ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಅಗರ್‌ವಾಲ್ ಸಂಬಂಧಿ ನಿಧಿ ಎಂಬಾಕೆಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಕೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

 ಮಂಗಳವಾರ ಪುನೀತ್ ಅಗರವಾಲ್ ಮತ್ತು ಅವರ ಕುಟುಂಬ ಹೊಸ ವರ್ಷಾಚರಣೆಗಾಗಿ ಫಾರ್ಮ್‌ಹೌಸ್‌ನಲ್ಲಿ ಸೇರಿದ್ದರು. ಹೊಸ ವರ್ಷದ ಆಚರಣೆ ನಂತರ ಅವರು ಎಲಿವೇಟರ್‌ನಲ್ಲಿ ಕೆಳಗಿಳಿಯುತ್ತಿದ್ದಾಗ ಸುಮಾರು 70 ಅಡಿಗಿಂತ ಎತ್ತರದಲ್ಲಿ ಅದು ಕುಸಿದು ಬಿದ್ದಿದೆ ಎಂದು ಬದಗೊಂಡ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ರಾಬರ್ಟ್ ಗಿರ್ವಾಲ್  ಹೇಳಿದ್ದಾರೆ.

 ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಕುಟುಂಬಕ್ಕೆ ಬಿಟ್ಟುಕೊಡಲಾಗಿದೆ. ಫಾರೆನ್ಸಿಕ್ ಸಯನ್ಸ್ ಲ್ಯಾಬೊರೇಟರಿ ತಂಡವು ಇಲ್ಲಿಗೆ ಭೇಟಿ ನೀಡಿದ್ದು, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು  ಪೊಲೀಸರು ಹೇಳಿದ್ದಾರೆ. ಕಟ್ಟಡ ನಿರ್ಮಾಣ ಕಂಪನಿಯಾಗಿರುವ  ಪಾಥ್ ಇಂಡಿಯಾ ಲಿಮಿಟೆಡ್‌ನ ಮಾಲೀಕರಾಗಿದ್ದಾರೆ ಪುನೀತ್ ಅಗರವಾಲ್.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು