ಶನಿವಾರ, ಫೆಬ್ರವರಿ 22, 2020
19 °C

ಫಾಸ್ಟ್ಯಾಗ್ ಇಲ್ಲದಿದ್ದರೆ ಟೋಲ್‌ ದುಪ್ಪಟ್ಟು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಕೇಂದ್ರಗಳಲ್ಲಿ ಫಾಸ್ಟ್ಯಾಗ್ ಲೇನ್‌ ಮೂಲಕ ಸಂಚರಿಸುವ ‘ಟ್ಯಾಗ್ ರಹಿತ’ ವಾಹನಗಳಿಗೆ ಡಿಸೆಂಬರ್ 1ರಿಂದ ದುಪ್ಪಟ್ಟು ಶುಲ್ಕ (ರಸ್ತೆ ಬಳಕೆ ಸುಂಕ) ವಿಧಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.

ಎಲ್ಲ ಟೋಲ್ ಕೇಂದ್ರಗಳಲ್ಲಿ ಫಾಸ್ಟ್ಯಾಗ್ ಮೂಲಕವೇ ರಸ್ತೆ ಬಳಕೆ ಸುಂಕ ಸಂಗ್ರಹಿಸಲಾಗುತ್ತದೆ. ಆದರೆ ಒಂದು ಲೇನ್‌ನಲ್ಲಿ ಮಾತ್ರ ಫ್ಯಾಸ್ಟ್ಯಾಗ್ ರಹಿತ ವಾಹನಗಳು ಸಾಮಾನ್ಯ ಶುಲ್ಕ ಪಾವತಿಸಿ ಸಂಚರಿಸಲು ಅವಕಾಶವಿದೆ. 

ವಿದ್ಯುನ್ಮಾನ ಟೋಲ್ ಸಂಗ್ರಹಕ್ಕೆ ಎಲ್ಲ ಟೋಲ್‌ ಕೇಂದ್ರಗಳನ್ನು ಶೇ 100ರಷ್ಟು ಅಣಿಗೊಳಿಸಲಾಗಿದೆ. ಸಮಯ ವ್ಯರ್ಥ ಮಾಡದೇ, ವಾಹನಗಳ ಸುಗಮ ಸಂಚಾರಕ್ಕೆ ದೇಶದಾದ್ಯಂತ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಎಲ್ಲ ಟೋಲ್‌ ಕೇಂದ್ರಗಳಲ್ಲಿ ‘ಟ್ಯಾಗ್’ ಸಿಗಲಿವೆ. ಆಯ್ದ 22 ಬ್ಯಾಂಕ್‌ಗಳು ಹಾಗೂ ಆನ್‌ಲೈನ್ ಮೂಲಕವೂ ಟ್ಯಾಗ್ ಖರೀದಿಸಬಹುದು. ವಾಹನದ ಮುಂಭಾಗದ ಗಾಜಿನ ಮೇಲೆ ಟ್ಯಾಗ್ ಅಳವಡಿಸಬೇಕು. 

ಅಂಕಿ–ಅಂಶ

* ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಕೇಂದ್ರಗಳ ಸಂಖ್ಯೆ 

* ಮುಂದಿನ 5 ವರ್ಷಗಳಲ್ಲಿ ಇಲಾಖೆ ನಿರೀಕ್ಷಿಸಿರುವ ಆದಾಯ ₹1 ಲಕ್ಷ ಕೋಟಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು