ಶನಿವಾರ, ಏಪ್ರಿಲ್ 4, 2020
19 °C

ಪುಣೆಯಲ್ಲಿ 5 ಕೊರೊನಾವೈರಸ್ ಪಾಸಿಟಿವ್ ಪ್ರಕರಣ ಪತ್ತೆ

ಮೃತ್ಯುಂಜಯ ಬೋಸ್ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಪುಣೆಯ ಐವರು ರೋಗಿಗಳಲ್ಲಿ ಕೊರೊನಾವೈರಸ್‌ ಪಾಸಿಟಿವ್‌ ಫಲಿತಾಂಶ ಬಂದಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ರಾಜೇಶ್ ತಾಪೆ ಹೇಳಿದರು.

ದುಬೈನಿಂದ ಬಂದಿದ್ದ ಪುಣೆಯ ದಂಪತಿಯಲ್ಲಿ ಸೋಮವಾರ ಕೊರೊನಾವೈರಸ್ ಪಾಸಿಟಿವ್ ಪತ್ತೆಯಾಗಿತ್ತು. ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸಲಾಯಿತು. ಮಂಗಳವಾರ ಈ ದಂಪತಿಯ ಪುತ್ರಿ, ಅವರನ್ನು ಮುಂಬೈನಿಂದ ಪುಣೆಗೆ ಕರೆತಂದ ಕ್ಯಾಬ್ ಚಾಲಕ, ಸಹ ಪ್ರಯಾಣಿಕರಲ್ಲಿಯೂ ಪಾಸಿಟಿವ್ ಫಲಿತಾಂಶ ಬಂತು. ಇವರೆಲ್ಲರಿಗೂ ಪುಣೆಯ ನಾಯ್ಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

‘ರೋಗಿಗಳ ಸ್ಥಿತಿ ನಿಯಂತ್ರಣದಲ್ಲಿದೆ. ಒಬ್ಬರಲ್ಲಿ ಕೊರೊನಾದ ಕೆಲ ಲಕ್ಷಣಗಳು ಕಂಡುಬಂದಿವೆ. ಇನ್ನೊಬ್ಬರಲ್ಲಿ ಈವರೆಗೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಇವರ ಜೊತೆಗೆ ಸಂಪರ್ಕಕ್ಕೆ ಬಂದಿದ್ದ ಇತರ ಜನರನ್ನು ಸಂಪರ್ಕಿಸುವ ಪ್ರಯತ್ನ ಸಾಗಿದೆ’ ಎಂದು ಪುಣೆ ವಿಭಾಗೀಯ ಆಯುಕ್ತ ಡಾ.ದೀಪಕ್ ಹೇಳಿದರು.

ಒಟ್ಟು 40 ಜನರ ಗುಂಪಿನೊಂದಿಗೆ ಈ ದಂಪತಿ ಕಳೆದ ಫೆಬ್ರುವರಿ ದುಬೈಗೆ ತೆರಳಿದ್ದರು. ಮಾರ್ಚ್ 1ರಂದು ಹಿಂದಿರುಗಿದ್ದರು. ದುಬೈಗೆ ತೆರಳಿದ್ದ ಎಲ್ಲ 40 ಮಂದಿಯ ವಿಳಾಸ ಪತ್ತೆಮಾಡಲಾಗಿದೆ. ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಯ ತಂಡ ರಚಿಸಲಾಗಿದ್ದು, ಈ 40 ಮಂದಿಯ ಸಂಪರ್ಕದಲ್ಲಿರುವವರ ಆರೋಗ್ಯ ತಪಾಸಣೆಯ ಜವಾಬ್ದಾರಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು