ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ ಮ್ಯಾಪ್‌ನಿಂದ ಕೋವಿಡ್‌–19 ಸಂಚಾರ ನಿರ್ಬಂಧ ಮಾಹಿತಿ

Last Updated 9 ಜೂನ್ 2020, 7:15 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಸಂಬಂಧ ವಿಧಿಸಲಾಗಿರುವ ಸಂಚಾರ ನಿರ್ಬಂಧಗಳ ಮಾಹಿತಿ ಈಗ ಗೂಗಲ್‌ ಮ್ಯಾಪ್‌ಗಳಲ್ಲಿಯೂ ಬಳಕೆದಾರರಿಗೆ ಲಭ್ಯ.

‘ಗೂಗಲ್’‌ ಇಂಥದೊಂದು ಸೌಲಭ್ಯವನ್ನು ಈಗ ಮ್ಯಾಪ್ಸ್‌ನಲ್ಲಿ ಅಳವಡಿಸಿದೆ ಎಂದು ಸೋಮವಾರ ಆಲ್ಪಬೆಟ್‌ ಇಂಕ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನೂತನ ಸೌಲಭ್ಯದಿಂದಾಗಿ ಬಳಕೆದಾರರಿಗೆ ನಿರ್ದಿಷ್ಟ ವೇಳೆಯಲ್ಲಿ ರೈಲ್ವೆ ನಿಲ್ದಾಣ ಅಥವಾ ಬಸ್‌ಗಳಲ್ಲಿ ಎಷ್ಟು ಜನದಟ್ಟಣೆ ಇರುತ್ತದೆ ಎಂಬುದರ ಮಾಹಿತಿಯೂ ಸಿಗಲಿದೆ.

ಸಂಚಾರದ ಎಚ್ಚರಿಕೆ ಸಂದೇಶಗಳು ಬರುವ ಈ ಸೌಲಭ್ಯವನ್ನು ಸದ್ಯ ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಜಾರಿಗೊಳಿಸಲಾಗಿದೆ.

ಗೂಗಲ್‌ ತನ್ನ ಬ್ಲಾಗ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದೆ. ನೂತನ ಸೌಲಭ್ಯದಲ್ಲಿ ಕೆನಡಾ, ಮೆಕ್ಸಿಕೊ, ಅಮೆರಿಕದಲ್ಲಿ ದೇಶದ ಗಡಿ ದಾಟುವಾಗ ಸಿಗುವ ಕೋವಿಡ್‌ ಚೆಕ್‌ಪಾಯಿಂಟ್‌ಗಳ ವಿವರವೂ ಸಿಗಲಿದೆ.

ವಿಶ್ವದ ಭೌಗೋಳಿಕ ನಕ್ಷೆಯನ್ನು ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸಲು ಗೂಗಲ್ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದೆ. ಅಸಂಖ್ಯ ಜನರು ಗೂಗಲ್‌ ಮ್ಯಾಪ್‌ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT