ಬುಧವಾರ, ಜನವರಿ 29, 2020
28 °C

ಪ್ರತಿಭಟನೆ ಮಧ್ಯೆ, ಪಾಕ್ ಮಹಿಳೆಗೆ ಭಾರತೀಯ ಪೌರತ್ವ!

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಹಸೀನಾ ಬೆನ್

ದೇವಭೂಮಿ ದ್ವಾರಕಾ (ಗುಜರಾತ್): ಪೌರತ್ವ (ತಿದ್ದುಪಡಿ) ಕಾಯ್ದೆಯ ಬಗ್ಗೆ ಆತಂಕಗೊಂಡಿರುವವರಿಗೊಂದು ಕಣ್ತೆರೆಸುವ ಪ್ರಕರಣವಿದು. ಈ ಕಾಯ್ದೆಯಿಂದ ಮುಸಲ್ಮಾನರಿಗೆ ತೊಂದರೆಯಾಗುತ್ತದೆ ಎಂದು ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವಂತೆಯೇ, ಪಾಕಿಸ್ತಾನಿ ಮೂಲದ ಮಹಿಳೆಯೊಬ್ಬಾಕೆಗೆ ಭಾರತೀಯ ಪೌರತ್ವ ದೊರೆತಿದೆ.

ಹಸೀನಾ ಬೆನ್ ಎಂಬ ಮಹಿಳೆ ಹುಟ್ಟಿದ್ದು, ಬೆಳೆದಿದ್ದು ಗುಜರಾತ್‌ನ ಭಾನ್‌ವಡ್ ತಾಲೂಕಿನಲ್ಲಿ. ಆದರೆ ಆಕೆ ಮದುವೆಯಾಗಿ ಪಾಕಿಸ್ತಾನಕ್ಕೆ ಹೋಗಿದ್ದಳು. 1999ರಲ್ಲಿ ಮದುವೆಯಾದ ಬಳಿಕ ಭಾರತೀಯ ಪೌರತ್ವ ತೊರೆದು ಪಾಕಿಸ್ತಾನಿ ಪೌರತ್ವ ಪಡೆದುಕೊಂಡು, ಅಲ್ಲಿ ವೈವಾಹಿಕ ಜೀವನವನ್ನು ಕಳೆದಿದ್ದಳು. ಇದೀಗ ಹಸೀನಾ ಬೆನ್ ತನ್ನ ಪತಿಯ ಮರಣಾನಂತರ ಭಾರತಕ್ಕೆ ಮರಳಲು ನಿರ್ಧರಿಸಿದ್ದಳು. ಹೀಗಾಗಿ, ಸುಮಾರು ಎರಡು ವರ್ಷಗಳ ಹಿಂದೆ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಳು. ಡಿಸೆಂಬರ್ 18ರ ಬುಧವಾರ ಅವಳಿಗೆ ಭಾರತೀಯ ಪೌರತ್ವ ಪ್ರಾಪ್ತವಾಗಿದೆ.

ಆಕೆಯ ಅರ್ಜಿಯನ್ನು ಪರಿಶೀಲಿಸಲಾಗಿ, ಭಾರತ ಸರ್ಕಾರವು ಪೌರತ್ವ ನೀಡಲು ಅನುಮತಿ ನೀಡಿದೆ ಎಂದು ದ್ವಾರಕಾ ಜಿಲ್ಲಾಧಿಕಾರಿ ಡಾ.ನರೇಂದ್ರ ಕುಮಾರ್ ಮೀನಾ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಲಾಗಿದೆ. ಬುಧವಾರ ಹಸೀನಾ ಬೆನ್‌ಗೆ ಪೌರತ್ವದ ಪ್ರಮಾಣಪತ್ರ ವಿತರಿಸಲಾಗಿದೆ.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟದ ವಿರುದ್ಧ ಬಿಜೆಪಿ ಮನಮೋಹನ್‌ ಸಿಂಗ್‌ ಅಸ್ತ್ರ!

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಮುಸಲ್ಮಾನರಿಗೆ ಆತಂಕವಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿವೆ. ಇದರಿಂದ ಭಾರತೀಯ ನಾಗರಿಕರಿಗೆ, ಯಾವುದೇ ಧರ್ಮದವರಾಗಿದ್ದರೂ, ಯಾವುದೇ ಆತಂಕವಿಲ್ಲ ಎಂದು ಪ್ರಧಾನ ಮಂತ್ರಿ, ಗೃಹ ಮಂತ್ರಿ ಸೇರಿದಂತೆ ಹಲವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು