ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ರಾಜ್ಯಗಳಿಗೆ ₹5751 ಕೋಟಿ ವಿಪತ್ತು ಪರಿಹಾರ: ಕರ್ನಾಟಕಕ್ಕೆ ₹11.48 ಕೋಟಿ!

Last Updated 28 ಮಾರ್ಚ್ 2020, 9:30 IST
ಅಕ್ಷರ ಗಾತ್ರ

ನವದೆಹಲಿ: ಪ್ರವಾಹ, ಭೂಕುಸಿತ, ಚಂಡಮಾರುತ, ಬರದಿಂದ ತತ್ತರಿಸಿದ್ದ ಎಂಟು ರಾಜ್ಯಗಳಿಗೆ ನೀಡಬೇಕಿದ್ದ ಹೆಚ್ಚುವರಿ ಪರಿಹಾರವನ್ನು ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಿದೆ. ಕರ್ನಾಟಕವೂ ಸೇರಿದಂತೆ ಎಂಟು ರಾಜ್ಯಗಳಿಗೆ ₹5,751.27 ಕೋಟಿ ವಿಪ್ಪತ್ತು ಪರಿಹಾರವನ್ನು ಕೇಂದ್ರ ಘೋಷಿಸಿದೆ.

ಈ ಪರಿಹಾರದಲ್ಲಿ ಕರ್ನಾಟಕಕ್ಕೆ ಸಿಕ್ಕಿರುವುದು ಕೇವಲ ₹11.48 ಕೋಟಿಗಳಷ್ಟೇ.

ಗೃಹ ಮಂತ್ರಿ ಅಮಿತ್‌ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಇಂದು ಸಭೆ ನಡೆಸಿ ಹೆಚ್ಚುವರಿ ಪರಿಹಾರ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿತು. ಮಹಾರಾಷ್ಟ್ರಕ್ಕೆ ₹1,758.18 ಕೋಟಿ, ರಾಜಸ್ಥಾನಕ್ಕೆ ₹1090.06ಕೋಟಿ ನೀಡಲಾಗಿದ್ದರೆ, ಕರ್ನಾಟಕಕ್ಕೆ ಪಶುಸಂಗೋಪನೆ ವಲಯದ ಅಡಿಯಲ್ಲಿ 2018–19ರ ಆರ್ಥಿಕ ವರ್ಷದ ಬರ ಪರಿಹಾರವಾಗಿ ₹11.48 ಕೋಟಿ ಬಿಡುಗಡೆ ಮಾಡಲಾಗಿದೆ.

ಇದೇ ವೇಳೆ, ಬಿಹಾರಕ್ಕೆ ₹953.17 ಕೋಟಿ, ಕೇರಳಕ್ಕೆ ₹460.77 ಕೋಟಿ, ನಾಗಾಲ್ಯಾಂಡ್‌ಗೆ ₹177.37 ಕೋಟಿ, ಒಡಿಶಾಕ್ಕೆ ₹179.64 ಕೋಟಿ, ಪಶ್ಚಿಮ ಬಂಗಾಳಕ್ಕೆ ₹1,090.68 ಕೋಟಿ ಹೆಚ್ಚುವರಿ ಪರಿಹಾರ ನೀಡಲಾಗಿದೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಅಡಿಯಲ್ಲಿ ಕೇಂದ್ರ ಸರ್ಕಾರವು ಈ ಪರಿಹಾರ ಘೋಷಣೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT