ಮಂಗಳವಾರ, ನವೆಂಬರ್ 19, 2019
28 °C

ಆಸ್ಕರ್ ಸ್ಪರ್ಧೆಗೆ ‘ಗಲ್ಲಿಬಾಯ್‌’ ಆಯ್ಕೆ

Published:
Updated:

ನವದೆಹಲಿ: ಈ ವರ್ಷದ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಜೋಯಾ ಆಖ್ತರ್‌ ಅವರ ‘ಗಲ್ಲಿ ಬಾಯ್‌’ ಚಿತ್ರವನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು ಎಂದು ಭಾರತೀಯ ಚಲನಚಿತ್ರ ಒಕ್ಕೂಟ ಶನಿವಾರ ತಿಳಿಸಿದೆ.

ಈ ಚಿತ್ರ ಫೆಬ್ರುವರಿಯಲ್ಲಿ ದೇಶದಾದ್ಯಂತ ತೆರೆಕಂಡಿದೆ. ಪ್ರಮುಖ ಪಾತ್ರದಲ್ಲಿ ರಣವೀರ್ ಸಿಂಗ್‌ ಅವರೊಂದಿಗೆ ಅಲಿಯಾ ಭಟ್‌, ವಿಜಯ್‌ ರಾಜ್‌, ಸಿದ್ದಾಂತ್ ಚತುರ್ವೇದಿ, ವಿಜಯ್‌ ವರ್ಮಾ ಇತರರು ನಟಿಸಿದ್ದಾರೆ.

‘ಇತರ 27 ಚಿತ್ರಗಳು ಇದ್ದವು. ಆದರೆ ಗಲ್ಲಿ ಬಾಯ್‌ ಅನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು’ ಎಂದು ಎಫ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಸುಪರ್ಣ ಸೇನ್‌ ಅವರು ತಿಳಿಸಿದ್ದಾರೆ.

ಚಿತ್ರಗಳ ಆಯ್ಕೆಯಲ್ಲಿ ನಿರ್ಮಾಪಕಿ ಅಪರ್ಣಾ ಸೇನ್‌ ತೀರ್ಪುಗಾರರ ಮುಖ್ಯಸ್ಥರಾಗಿದ್ದರು.

 

ಪ್ರತಿಕ್ರಿಯಿಸಿ (+)