ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವೇಶ್ವರಯ್ಯ’ ಹೆಸರು ಬರೆಯುವುದು ಹೇಗೆ? ದೆಹಲಿ ಮೆಟ್ರೊಗೆ ಎದುರಾದ ಸಮಸ್ಯೆ

Last Updated 22 ಜೂನ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರನ್ನು ಇಂಗ್ಲಿಷ್‌ನಲ್ಲಿ ಬರೆಯುವುದು ಹೇಗೆ? ಇಂಥದ್ದೊಂದು ಪ್ರಶ್ನೆ ದೆಹಲಿ ಮೆಟ್ರೊ ರೈಲ್‌ ಕಾರ್ಪೊರೇಷನ್‌ (ಡಿಎಂಆರ್‌ಸಿ) ಅಧಿಕಾರಿಗಳನ್ನು ಕಾಡುತ್ತಿದೆ!

ದೆಹಲಿಯ ಮೋತಿಬಾಗ್ ಮೆಟ್ರೊ ನಿಲ್ದಾಣಕ್ಕೆ ‘ಸರ್ ಎಂ. ವಿಶ್ವೇಶ್ವರಯ್ಯ ಮೋತಿಬಾಗ್ ನಿಲ್ದಾಣ’ ಎಂದು ಹೆಸರಿಡಲಾಗಿದ್ದು, ಅಧಿಕಾರಿಗಳು ಇಂಗ್ಲಿಷ್‌ನಲ್ಲಿ Sir M Vishweshwaraiah Moti Bagh Station ಎಂದು ನಾಮಫಲಕ ಬರೆಯಿಸಿದ್ದರು.

ಮೈಸೂರು ಸಂಸ್ಥಾನದ ದಿವಾನರೂ ಆಗಿದ್ದ ವಿಶ್ವೇಶ್ವರಯ್ಯ ಅವರ ಹೆಸರಿನ ಕಾಗುಣಿತ (ಸ್ಪೆಲ್ಲಿಂಗ್‌) ಸರಿಯಾಗಿದೆಯೇ ಎಂಬ ಪ್ರಶ್ನೆ ಈಗ ಎದ್ದಿದೆ.

ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರದ ಅಧ್ಯಕ್ಷ ಆರ್‌.ಶ್ರೀಧರನ್‌ ಅವರು ಡಿಎಂಆರ್‌ಸಿ ಅಧ್ಯಕ್ಷ ಮಾಂಗುಸಿಂಗ್ ಅವರಿಗೆ ಈಚೆಗೆ ಪತ್ರ ಬರೆದು, ‘ಹೆಸರಿನ ಕಾಗುಣಿತವು ವಿಶ್ವೇಶ್ವರಯ್ಯ ಅವರು ಬಳಸುತ್ತಿದ್ದ ಕ್ರಮದಲ್ಲಿ ಇಲ್ಲ. ಎಂ.ವಿ ಅವರು ತಮ್ಮ ಹೆಸರನ್ನು M. Visvesvaraya ಎಂದು ಬರೆಯುತ್ತಿದ್ದರು’ ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಎಂಆರ್‌ಸಿ ಮತ್ತು ಕೇಂದ್ರ ಹಣಕಾಸು ಮತ್ತು ನಗರ ವ್ಯವಹಾರಗಳ ಸಚಿವಾಲಯವು, ‘ದೆಹಲಿ ಕನ್ನಡ ಸಂಘ’ದ ಸಲಹೆಯಂತೆ ಈ ಕಾಗುಣಿತ ಬಳಸಲಾಗಿದೆ’ ಎಂದು ಸ್ಪಷ್ಟಪಡಿಸಿತ್ತು.

ಈ ಕುರಿತು ಸಂಪರ್ಕಿಸಿದಾಗ ಸಂಘದ ಅಧ್ಯಕ್ಷ ವೆಂಕಟಾಚಲ ಜಿ.ಹೆಗ್ಡೆ ಅವರು, ‘ನಾನು ಇತ್ತೀಚೆಗಷ್ಟೇ ಅಧ್ಯಕ್ಷ ಸ್ಥಾನದ ಹೊಣೆ ಹೊತ್ತಿದ್ದು, ಈ ಲೋಪ ನನ್ನ ಗಮನಕ್ಕೆ ಬಂದಿಲ್ಲ. ಕರ್ನಾಟಕ ಸರ್ಕಾರವನ್ನು ಸಂಪರ್ಕಿಸಿ, ಅಗತ್ಯ ದಾಖಲೆಗಳೊಂದಿಗೆ ಡಿಎಂಆರ್‌ಸಿಗೆ ಪ್ರತಿಕ್ರಿಯೆಯನ್ನು ಕಳುಹಿಸುತ್ತೇವೆ’ ಎಂದರು.

ದೆಹಲಿ ಕರ್ನಾಟಕ ಸಂಘದ ಮನವಿಯಂತೆ ಅಂದಿನ ನಗರಾಭಿವೃದ್ಧಿ ಖಾತೆ ಸಚಿವ ಎಂ. ವೆಂಕಯ್ಯನಾಯ್ಡು ಅವರು ಈ ನಿಲ್ದಾಣಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಹೆಸರು ಇಡಲು ಸಮ್ಮತಿಸಿದ್ದರು.

ಅಂಚೆ ಇಲಾಖೆಯು ಡಾ. ಎಂ.ವಿಶ್ವೇಶ್ವರಯ್ಯ ಸ್ಮರಣಾರ್ಥ ಅಂಚೆ ಚೀಟಿ ತಂದಿದ್ದು, ಅದರಲ್ಲಿ Dr M Visvesvaraya ಎಂದು ಬಳಸಿದೆ. ಇದು ಸರಿಯಾಗಿದೆ ಎಂದು ಶ್ರೀಧರನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT