ಗುರುವಾರ , ಜುಲೈ 29, 2021
20 °C

ಮಗನ ಕಣ್ಣೆದುರೇ ಪತ್ನಿಯ ಮೇಲೆ ಅತ್ಯಾಚಾರವೆಸಗಿದ ಪತಿ ಮತ್ತು ಆತನ ಸ್ನೇಹಿತರು

ಅರ್ಜುನ್ ರಘುನಾಥ್ Updated:

ಅಕ್ಷರ ಗಾತ್ರ : | |

Stop rape

ತಿರುವನಂತಪುರಂ: ತಿರುವನಂತಪುರಂ ನಗರದಿಂದ ಸುಮಾರು 20 ಕಿಮೀ ದೂರದಲ್ಲಿರುವ ಕಠಿಣಂಕುಳಂ ಎಂಬಲ್ಲಿ ಗುರುವಾರ ರಾತ್ರಿ 25ರ ಹರೆಯದ ಯುವತಿಯನ್ನು ಆಕೆಯ ಪತಿ ಮತ್ತು ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ಮಗನ ಕಣ್ಣೆದುರೇ ಅತ್ಯಾಚಾರವೆಸಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆಯ ಹೇಳಿಕೆ ಪ್ರಕಾರ ಗುರುವಾರ ಸಂಜೆ ತನ್ನ ಪತಿ ಆಕೆ ಮತ್ತು ಇಬ್ಬರು ಮಕ್ಕಳನ್ನು ಕಡಲ ಕಿನಾರೆ ಬಳಿ ಇರುವ ಗೆಳೆಯನ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಕೆಗೆ ಬಲವಂತವಾಗಿ ಮದ್ಯ ಕುಡಿಸಲಾಗಿದೆ. ಇದಾದ ನಂತರ ನಾಲ್ವರು ವ್ಯಕ್ತಿಗಳು ಆಕೆಯನ್ನು ಕುರುಚಲು ಗಿಡವಿರುವ ಪ್ರದೇಶತ್ತ ಎಳೆದೊಯ್ದು ಅಲ್ಲಿ ಲೈಂಗಿಕ ದೌರ್ಜನ್ಯವೆಸಗಲಾಗಿದೆ. 5 ವರ್ಷದ ಹಿರಿಯ ಮಗನ ಮೇಲೆಯೂ ಹಲ್ಲೆ ನಡೆದಿದೆ.

ಪ್ರಜ್ಞೆ ತಪ್ಪಿ ಬಿದ್ದಿದ್ದ  ಆಕೆ ಮಗನ ಅಳು ಕೇಳಿ ಎಚ್ಚೆತ್ತಿದ್ದಾಳೆ. ಕಿರಿಯ ಮಗ ಗಂಡನ ಬಳಿ ಇದ್ದ. ಆ ದಾರಿಯಾಗಿ ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳ ಸಹಾಯದಿಂದ ಆಕೆ ಮನೆಗೆ ಬಂದಿದ್ದಾಳೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಬಾರದು ಎಂದು ಆಕೆಯ ಗಂಡ ಬೆದರಿಕೆಯೊಡ್ಡಿದ್ದನು.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಆಕೆಯ ಪತಿ ಮತ್ತು ಇತರ ನಾಲ್ವರು ಆರೋಪಿಗಳನ್ನು ಗುರುವಾರ ರಾತ್ರಿಯೇ ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು