ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ತುರ್ತು ಚಿಕಿತ್ಸೆಗೆ ಮಲೇರಿಯಾಗೆ ಬಳಸುವ HCQ ಮದ್ದು

Last Updated 23 ಮಾರ್ಚ್ 2020, 15:19 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌–2 ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುತ್ತಿರುವವರು ಹಾಗೂ ಗಮನಿಸುತ್ತಿರುವವರುತುರ್ತು ಸಂದರ್ಭಗಳಲ್ಲಿಚಿಕಿತ್ಸೆಗಾಗಿ ಹೈಡ್ರಾಕ್ಸಿ–ಕ್ಲೋರೊಕ್ವೀನ್‌ (HCQ:hydroxy-chloroquine) ಬಳಸಬಹುದುಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಸೋಮವಾರ ತಿಳಿಸಿದೆ.

ಕೋವಿಡ್–19 ದೃಢಪಟ್ಟ ಹಾಗೂ ಶಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗಳು ತಮ್ಮ ಆರೋಗ್ಯ ರಕ್ಷಣೆಗಾಗಿಹೈಡ್ರಾಕ್ಸಿ–ಕ್ಲೋರೊಕ್ವೀನ್‌ ಬಳಸಬಹುದು ಎಂದು ಐಸಿಎಂಆರ್‌ ಪ್ರಧಾನ ನಿರ್ದೇಶಕ ಬಲರಾಮ ಭಾರ್ಗವ ಹೇಳಿದ್ದಾರೆ.

ಹೈಡ್ರಾಕ್ಸಿ–ಕ್ಲೋರೊಕ್ವೀನ್‌ ಡ್ರಗ್‌ ಹಲವು ರೀತಿಯ ಮಲೇರಿಯಾ ಚಿಕಿತ್ಸೆಗಳಿಗೆ ಬಳಸಲಾಗುತ್ತಿದೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಶಿಫಾರಸು ಮಾಡಿರುವ ಈ ಚಿಕಿತ್ಸೆಯನ್ನು ತುರ್ತು ಸಂದರ್ಭದಲ್ಲಿ ಬಳಸಲು ಭಾರತೀಯ ಪ್ರಧಾನ ಔಷಧಿ ನಿಯಂತ್ರಕ (ಡಿಜಿಸಿಐ) ಅನುಮತಿ ನೀಡಿದೆ.

ಕೋವಿಡ್‌ 19 ಪರೀಕ್ಷೆಗಳನ್ನು ಮಾನ್ಯತೆ ಹೊಂದಿದಖಾಸಗಿ ಪ್ರಯೋಗಾಲಯಗಳು ಮಾಡಲು ಅವಕಾಶ ನೀಡಲಾಗಿದ್ದು, ಈವರೆಗೆ 12 ಖಾಸಗಿ ಪ್ರಯೋಗಾಲಯಗಳು ನೋಂದಣಿ ಮಾಡಿಕೊಂಡಿವೆ. ಈ 12 ಪ್ರಯೋಗಾಲಯಗಳು 15 ಸಾವಿರ ಮಾದರಿ ಸಂಗ್ರಹ ಕೇಂದ್ರಗಳನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT