ಶುಕ್ರವಾರ, ಫೆಬ್ರವರಿ 21, 2020
18 °C

ನಾನೊಬ್ಬ ನಿಷ್ಠೆಯ ಹಿಂದೂ: ಅರವಿಂದ ಕೇಜ್ರಿವಾಲ್ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Delhi Chief Minister Arvind Kejriwal during a road show

ದೆಹಲಿ: ಶಾಹೀನ್‌ಬಾಗ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ವಿಷಯವನ್ನಿಟ್ಟುಕೊಂಡೇ ದೆಹಲಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ನನ್ನನ್ನು ಹಿಂದೂ ವಿರೋಧಿಯೆಂದು ಬಿಂಬಿಸಲು ಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಸೋಮವಾರ ನ್ಯೂಸ್ 18 ಹಿಂದಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೇಜ್ರಿವಾಲ್ ನಾನೊಬ್ಬ ನಿಷ್ಠೆಯ ಹಿಂದೂ. ಬಿಜೆಪಿ ನನ್ನನ್ನ ಹಿಂದೂ ವಿರೋಧಿ ಎಂದು ಬಿಂಬಿಸಲು ಯಾಕೆ ಯತ್ನಿಸುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ. ನಾನು ನಿಷ್ಠೆಯ ಹಿಂದೂ ಮತ್ತು ಹನುಮಾನ್ ಭಕ್ತ ಎಂದಿದ್ದಾರೆ.

ಇದನ್ನೂ ಓದಿ: ಕೇಜ್ರಿವಾಲ್ ಓರ್ವ ಭಯೋತ್ಪಾದಕ ಎನ್ನಲು ಸಾಕಷ್ಟು ಆಧಾರಗಳಿವೆ: ಜಾವಡೇಕರ್

ಇನ್ನೊಂದು ಸುದ್ದಿ ವಾಹಿನಿ ನ್ಯೂಸ್ 24ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾತ್ರ ಮಾತನಾಡುತ್ತಿದೆ.  ಯಾಕೆಂದರೆ ಅವರಿಗೆ ದೆಹಲಿ ಚುನಾವಣೆ ಬಗ್ಗೆ ಹೇಳಲು ಬೇರೆ ವಿಷಯವೇ ಇಲ್ಲ. ಹಾಗಾಗಿ ಅವರು ನನ್ನನ್ನು ಭಯೋತ್ಪಾದಕ ಎಂದು ಹೇಳುತ್ತಿದ್ದಾರೆ.  ಪ್ರತಿಭಟನಕಾರರೊಂದಿಗೆ ಮಾತನಾಡಿ, ರಸ್ತೆಯಿಂದ ಅವರನ್ನು ತೆರವುಗೊಳಿಸುವುದು ಬಿಜೆಪಿ ನೇತೃತ್ವದ ಕರ್ತವ್ಯ  ಎಂದು ಹೇಳಿದ್ದಾರೆ.

ಅಂದ ಹಾಗೆ ಶಾಹೀನ್‌ಬಾಗ್‌ಗೆ ನೀವು ಯಾಕೆ ಹೋಗಿಲ್ಲ? ಜೆಎನ್‌ಯು ಮತ್ತು ಜಾಮಿಯಾ ಮಿಲಿಯಾದಲ್ಲಿ ದಾಳಿ ನಡೆದಾಗ ನೀವು ಯಾಕೆ ಅಲ್ಲಿಗೆ  ಭೇಟಿ ನೀಡಿಲ್ಲ ಎಂದು ಕೇಳಿದಾಗ,  ಕಾನೂನು ಸುವ್ಯವಸ್ಥೆ ಕೇಂದ್ರದ ಅಧೀನದಲ್ಲಿ ಬರುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಲ್ಲಿಗೆ ಹೋಗಬೇಕಿತ್ತು. ನಾನು ಅಲ್ಲಿಗೆ ಹೋಗಿ ಮಾಡುವಂತದ್ದೇನೂ ಇಲ್ಲ ಎಂದು ಕೇಜ್ರಿವಾಲ್ ಉತ್ತರಿಸಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು