ಶರದ್ ಯಾದವ್ ಮಾತಿನಿಂದ ಅವಮಾನವಾಗಿದೆ: ವಸುಂಧರಾ ರಾಜೇ

7

ಶರದ್ ಯಾದವ್ ಮಾತಿನಿಂದ ಅವಮಾನವಾಗಿದೆ: ವಸುಂಧರಾ ರಾಜೇ

Published:
Updated:

ಜಲಾವರ್: ಬಿಹಾರದ ಎಲ್‌‍ಜೆಡಿ ನಾಯಕ ಶರದ್ ಯಾದವ್ ಹೇಳಿಕೆಯಿಂದ ನನಗೆ ಅವಮಾನವಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹೇಳಿದ್ದಾರೆ.

ಶುಕ್ರವಾರ ಮತದಾನ ಮಾಡಿದ ನಂತರ ಎಎನ್‍ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ರಾಜೇ, ನಾನು ದಿಗ್ಭ್ರಮೆಗೊಂಡಿದ್ದೇನೆ. ಅವರು ಮಹಿಳೆಯರನ್ನು ಅವಮಾನಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಯುವ ಜನರ ಮುಂದೆ ಅವರು ನೀಡುವ ಉದಾಹರಣೆ ಇದೇನಾ? ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ಮಾತಿನಲ್ಲಿ ಹಿಡಿತವಿಟ್ಟುಕೊಳ್ಳಲಿ ಎಂದಿದ್ದಾರೆ.

 ಕಳೆದ ಶುಕ್ರವಾರ ಅಲ್ವಾರ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಶರದ್ ಯಾದವ್ ಅವರು ರಾಜೇ ಅವರ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಶರದ್ ಯಾದವ್ ವಿರುದ್ಧ ರಾಜಸ್ಥಾನದ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಶರದ್ ಯಾದವ್ ಹೇಳಿದ್ದೇನು? 

 ವಸುಂಧರಾ ಕೋ ಆರಾಮ್ ದೊ, ಬಹುತ್ ಥಕ್ ಗಯೀ ಹೈ. ಬಹುತ್ ಮೋಟಿ ಹೋ ಗಯೀ ಹೈ, ಪೆಹಲೇ ಪತ್‍ಲೀ ಥೀ. ಹಮಾರೆ ಮಧ್ಯ ಪ್ರದೇಶ್ ಕೀ ಬೇಟಿ ಹೈ ( ವಸುಂಧರಾ ಅವರಿಗೆ ವಿಶ್ರಾಂತಿ ನೀಡಿ, ಅವರು ತುಂಬಾ ಸುಸ್ತಾಗಿದ್ದಾರೆ. ಈಗ ಅವರು ದಪ್ಪ ಆಗಿದ್ದಾರೆ, ಮೊದಲು ತೆಳ್ಳಗಿದ್ದರು. ನಮ್ಮ ಮಧ್ಯಪ್ರದೇಶದ ಮಗಳು)  ಎಂದಿದ್ದರು. 

ತಮಾಷೆಗೆ ಹೇಳಿದೆ:  ಶರದ್ ಯಾದವ್
ತಾನು ತಮಾಷೆಗೆ ಹೇಳಿದೆ. ರಾಜೇ ಜತೆ ನಮ್ಮದು ಹಳೇ ಸಂಬಂಧ, ನಾನು ಹೀಯಾಳಿಸಿದ್ದಲ್ಲ. ಅವರಿಗೆ ನೋವುಂಟು ಮಾಡಬೇಕು ಎಂಬ ಯಾವ ಉದ್ದೇಶವೂ ನನಗಿಲ್ಲ. ಆಕೆಯನ್ನು ಭೇಟಿಯಾದಾಗ ನೀವು ದಪ್ಪ ಆಗುತ್ತಿದ್ದೀರಿ ಎಂದು ನಾನು ಹೇಳಿದ್ದೆ ಎಂದು 73ರ ಹರೆಯದ ಶರದ್ ಯಾದವ್ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !