ಸೋಮವಾರ, ಜುಲೈ 4, 2022
22 °C

ಐ ಲವ್ ಯೂ... ದೆಹಲಿ ಜನತೆಗೆ ಧನ್ಯವಾದ ಹೇಳಿದ ಅರವಿಂದ ಕೇಜ್ರಿವಾಲ್ 

ಪಿಟಿಐ Updated:

ಅಕ್ಷರ ಗಾತ್ರ : | |

kejriwal

ದೆಹಲಿ: ದೆಹಲಿಯ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಮತ್ತು ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅರವಿಂದ ಕೇಜ್ರಿವಾಲ್ ಐ ಲವ್ ಯೂ ಎಂದಿದ್ದಾರೆ.

 ನನ್ನನ್ನು ಮಗನೆಂದು ಪರಿಗಣಿಸಿದ ದೆಹಲಿ ಜನರ ಗೆಲುವು ಇದು. ಹನುಮಾನ್ ನಮ್ಮನ್ನು ಆಶೀರ್ವದಿಸಿದ್ದಾರೆ. ದೆಹಲಿಯ ಜನರ ಅಭಿವೃದ್ದಿಗಾಗಿ ದುಡಿಯಲು ದೇವರು ನಮಗೆ ಹೆಚ್ಚಿನ ಶಕ್ತಿ ನೀಡಲು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು ಇಲ್ಲಿಯವರಿಗೆ ಆಮ್ ಆದ್ಮಿ ಪಕ್ಷ 70 ಸೀಟುಗಳ ಪೈಕಿ 63ರಲ್ಲಿ ಮುನ್ನಡೆ ಸಾಧಿಸಿದೆ.  

ದೆಹಲಿಯಲ್ಲಿ ರಾಜಕೀಯ ಕೆಲಸ ಜನ್ಮ ತಾಳಿದೆ ಮತ್ತು ಎಎಪಿಯ ಗೆಲುವು ದೇಶದ ಗೆಲುವು ಆಗಿದೆ.   ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ಮುನ್ನ ಕೇಜ್ರಿವಾಲ್ 'ಭಾರತ್ ಮಾತಾ ಕೀ ಜೈ'  'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆ ಕೂಗಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು