ಗುರುವಾರ , ಸೆಪ್ಟೆಂಬರ್ 23, 2021
24 °C
ಆತ್ಮಚರಿತ್ರೆ ‘ಗೇಮ್‌ ಚೇಂಜರ್‌’ನಲ್ಲಿ ಗೌತಮ್‌ ಕುರಿತ ಹೇಳಿಕೆ

ಅಫ್ರಿದಿ ವಿರುದ್ಧ ಗಂಭೀರ್‌ ಗುಡುಗು

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಗಂಭೀರ್‌ ವರ್ತನೆ ಸರಿಯಿಲ್ಲ. ಅವರಿಗೆ ವ್ಯಕ್ತಿತ್ವವಿಲ್ಲ ಎಂದು ತಮ್ಮ ಆತ್ಮಚರಿತ್ರೆ ‘ಗೇಮ್‌ ಚೇಂಜರ್‌’ ನಲ್ಲಿ ಬರೆದುಕೊಂಡಿರುವ ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಶಾಹಿದ್‌ ಅಫ್ರಿದಿ ವಿರುದ್ಧ ಮಾಜಿ ಕ್ರಿಕೆಟರ್‌ ಗೌತಮ್‌ ಗಂಭೀರ್‌ ಗುಡುಗಿದ್ದಾರೆ.

ಅಫ್ರಿದಿ ಅವರ ಆತ್ಮಚರಿತ್ರೆಯಲ್ಲಿ ಗೌತಮ್‌ ಗಂಭೀರ್‌ ಅವರ ಕುರಿತು ಉಲ್ಲೇಖವಿರುವುದು ದೊಡ್ಡ ಸುದ್ದಿಯಾಗಿತ್ತು. ಇದೇ ಹಿನ್ನೆಲೆಯಲ್ಲಿ ಶನಿವಾರ ಟ್ವೀಟ್‌ ಮಾಡಿರುವ ಗಂಭೀರ್‌, ‘ಅಫ್ರಿದಿ ನೀನೊಬ್ಬ ಹುಚ್ಚ. ವೈದ್ಯಕೀಯ ಕಾರಣಕ್ಕಾಗಿ ಭಾರತವು ಈಗಲೂ ಪಾಕಿಸ್ತಾನಿಯರಿಗೆ ವೀಸಾ ನೀಡುತ್ತಿದೆ. ನಿನ್ನನ್ನು ಸ್ವತಃ ನಾನೇ ಮನೋತಜ್ಞರ ಬಳಿಗೆ ಕರೆದೊಯ್ಯುತ್ತೇನೆ,’ ಎಂದು ಗಂಭೀರ್‌ ಟ್ವೀಟ್‌ ಮಾಡಿದ್ದಾರೆ.

ಗಂಭೀರ್‌ ಕುರಿತ ತಮ್ಮ ಅಭಿಪ್ರಾಯವನ್ನು ವಿವರವಾಗಿ ಬರೆದಿದ್ದ ಅಫ್ರಿದಿ, ಅವರ ನಡವಳಿಕೆಯನ್ನು ಡಾನ್‌ ಬ್ರಾಡ್ಮನ್‌ ಮತ್ತು ಜೇಮ್ಸ್‌ ಬಾಂಡ್‌ಗೆ ಹೋಲಿಸಿದ್ದರು. ಅವರಂತೆಯೇ ಮುಂಗೋಪಿಯಾಗಿದ್ದರೂ, ಧನಾತ್ಮಕ ಆಲೋಚನೆಗಳಿಲ್ಲದ ವ್ಯಕ್ತಿ. ಇವರಿಗೆ ವ್ಯಕ್ತಿತ್ವವೇ ಇಲ್ಲ ಎಂದು ಜರಿದಿದ್ದರು. 

2007ರಲ್ಲಿ ಕಾನ್ಪುರ್‌ನಲ್ಲಿ ನಡೆದ ಏಷ್ಯಾಕಪ್‌ ಪಂದ್ಯದಲ್ಲಿ ಗೌತಮ್‌ ಗಂಭೀರ್‌ ಮತ್ತು  ಶಾಹಿದ್‌ ಅಫ್ರಿದಿ ಜಗಳವಾಡಿದ್ದರು. ಕ್ರಿಕೆಟ್‌ ನಂತರವೂ ಇವರಿಬ್ಬರ ಕಿತ್ತಾಟ ಮುಂದುವರಿದಿದೆ.  

ಸ್ಪಾಟ್‌ ಫಿಕ್ಸಿಂಗ್ ಗೊತ್ತಿತ್ತು
ಗೇಮ್‌ ಚೇಂಜರ್‌ನಲ್ಲಿ ಅಫ್ರಿದಿ, 2010ರಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್‌ ಕುರಿತು ಪ್ರಸ್ತಾಪಿಸಿದ್ದು, ಬುಕ್ಕಿಗಳು ಮತ್ತು ಆಟಗಾರರ ನಡುವೆ ನಡೆಯುತ್ತಿದ್ದ ಎಸ್‌ಎಂಎಸ್‌ಗಳ ಬಗ್ಗೆ ಗೊತ್ತಿತ್ತು ಎಂದಿದ್ದಾರೆ. ವಿವಾದ ಭುಗಿಲೇಳುವ ಮೊದಲೇ ಈ ಕುರಿತು ಕೋಚ್‌ ವಕಾರ್‌ ಯೂನಿಸ್‌ ಗಮನಕ್ಕೆ ತಂದಿದ್ದೆ, ಆದರೆ ಅವರು ತಕ್ಷಣ ಕ್ರಮ ಕೈಗೊಳ್ಳಲು ನಿರಾಕರಿಸಿದರು. ವಿವಾದ ಬೆಳಕಿಗೆ ಬಂದಾಗ ಪಾಕಿಸ್ತಾನ ಕ್ರಿಕೆಟ್‌ ತಂಡ ಸಂಕಷ್ಟಕ್ಕೆ ಸಿಲುಕಿತು. ಭವಿಷ್ಯದ ಉತ್ತಮ ಆಟಗಾರರನ್ನು ನಾವು ಕಳೆದುಕೊಂಡೆವು ಎಂದಿದ್ದಾರೆ. ಅಲ್ಲದೆ, ವಿವಾದ ನಿರ್ವಹಣೆ ಕುರಿತು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು