ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನದಾರರಿಗೆ ಬಜೆಟ್‌ ಬೋನಸ್: ₹ 5 ಲಕ್ಷ ವರೆಗೆ ತೆರಿಗೆ ವಿನಾಯ್ತಿ

Last Updated 1 ಫೆಬ್ರುವರಿ 2019, 7:35 IST
ಅಕ್ಷರ ಗಾತ್ರ

ನವದೆಹಲಿ:₹5 ಲಕ್ಷದ ವರೆಗೂ ಆದಾಯ ಹೊಂದಿರುವ ವೇತನದಾರರಿಗೆಯಾವುದೇ ತೆರಿಗೆ ಇಲ್ಲ ಎಂದು ವಿತ್ತ ಸಚಿವರು ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ಮಧ್ಯಮ ವರ್ಗದ ಜನರಿಗೆ ಬೋನಸ್‌ ನೀಡಿದ್ದಾರೆ.

ಶೇ 5ರಷ್ಟು ಇದ್ದ ತೆರಿಗೆಯನ್ನು ರದ್ದು ಗೊಳಿಸಿರುವುದಾಗಿ ಘೋಷಣೆ ಬಜೆಟ್‌ ಮಂಡಿಸಿದ ವಿತ್ತ ಸಚಿವ ಪಿಯೂಷ್‌ ಗೋಯಲ್‌ ಹೇಳಿದರು.

* ಈ ಘೋಷಣೆಯಿಂದಾಗಿ₹5 ಲಕ್ಷ ಆದಾಯ ಹೊಂದಿರುವವರು ತೆರಿಗೆಯಿಂದ ಮುಕ್ತವಾಗಲಿದ್ದು,ಮಧ್ಯಮ ವರ್ಗದ ವೇತನದಾರರುಸೇರಿದಂತೆ ಸುಮಾರು 3 ಕೋಟಿ ಜನರಿಗೆ ತೆರಿಗೆ ಇಲ್ಲ.

*ಪಿ.ಎಫ್‌ ಸೇರಿದಂತೆ ಹಲವು ಉಳಿತಾಯಗಳಲ್ಲಿ ಉಳಿಸುವುದು ಸೇರಿದಂತೆ ಒಟ್ಟು ₹6.5 ಲಕ್ಷ ಆದಾಯದವರೆಗೂ ತೆರಿಗೆ ಬರುವುದಿಲ್ಲ.

*ಸ್ಟಾಂಡರ್ಡ್‌ ಡಿಡಕ್ಷನ್‌ ₹40 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ.

* ಒಟ್ಟು ಆದಾಯ ₹6.5 ಲಕ್ಷ ಇದ್ದು, ₹1.5 ಲಕ್ಷದ ವರೆಗೂ ಉಳಿತಾಯ ಮಾಡಿದರೆ; ₹5 ಲಕ್ಷದ ವರೆಗೂ ತೆರಿಗೆ ಇರುವುದಿಲ್ಲ. ₹7 ಲಕ್ಷಕ್ಕಿಂತಲೂ ಹೆಚ್ಚು ಆದಾಯ ಹೊಂದಿರುವವರಿಗೆ ತೆರಿಗೆ ಇದೆ.

* ಯಾವುದೇ ಹೊಸ ತೆರಿಗೆ ಇಲ್ಲ.

* ₹2.4 ಲಕ್ಷದ ವರೆಗಿನ ಮನೆ ಬಾಡಿಗೆಗೆ ಮೂಲದಲ್ಲಿ ತೆರಿಗೆ ಕಡಿತ ಇಲ್ಲ.

ತೆರಿಗೆದಾರರಿಂದ ಹಲವು ಯೋಜನೆಗಳ ಅನುಷ್ಠಾನವಾಗಿದೆ ಎಲ್ಲ ತೆರಿಗೆದಾರರಿಗೂ ಧನ್ಯವಾದಗಳು ಎಂದ ಪಿಯೂಷ್‌ ಗೋಯಲ್‌, ತೆರಿಗೆ ಪಾವತಿದಾರರ ಸಂಖ್ಯೆ 3.79 ಕೋಟಿಯಿಂದ 6.85 ಕೋಟಿ ಮುಟ್ಟಿದೆ. ಆದಾಯ ತೆರಿಗೆ ಪಾವತಿಯನ್ನು 24 ಗಂಟೆಯ ಒಳಗೆ ಪರಿಶೀಲಿಸಿ, ಪ್ರತಿಕ್ರಿಯಿಸುವ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT