ಭಾನುವಾರ, ಸೆಪ್ಟೆಂಬರ್ 20, 2020
23 °C

1997–98ರ ಬಳಿಕ ಕನಿಷ್ಠ ಮಟ್ಟಕ್ಕಿಳಿದ ವಾಹನ ಮಾರಾಟ ಪ್ರಮಾಣ

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ:  ಭಾರತದಲ್ಲಿ ಪ್ರಯಾಣಿಕ ವಾಹನಗಳು ಮತ್ತು ಕಾರುಗಳ ಮಾರಾಟ ಪ್ರಮಾಣ ಆಗಸ್ಟ್‌ನಲ್ಲಿ ಭಾರಿ ಪ್ರಮಾಣದಲ್ಲಿ ಕುಸಿದಿದೆ.

ತಿಂಗಳ ಮಾರಾಟದ ಲೆಕ್ಕದಲ್ಲಿ ಆಗಸ್ಟ್‌ನಲ್ಲಿ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಮಾರಾಟವಾಗಿದೆ.  ಪ್ರಯಾಣಿಕ ವಾಹನಗಳ ಮಾರಾಟವು ಆಗಸ್ಟ್‌ನಲ್ಲಿ 31.57ರಷ್ಟು ಕುಸಿದಿದ್ದು, 196524 ವಾಹನಗಳು ಮಾರಾಟಗೊಂಡಿವೆ. ಇನ್ನು ಕಾರುಗಳ ಮಾರಾಟವು ಶೇ. 41.09ರಷ್ಟು ಕುಸಿದಿದ್ದು, ಈ ತಿಂಗಳಲ್ಲಿ ಕೇವಲ 115957 ಕಾರುಗಳಷ್ಟೇ ಮಾರಾಟಗೊಂಡಿವೆ. 1997-98ರ ನಂತರದಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ವಾಹನ ಮಾರಾಟ ಕುಸಿದಿದೆ ಎಂದು ಭಾರತೀಯ ಆಟೊಮೊಬೈಲ್‌ ಉತ್ಪಾದಕ ಸಂಸ್ಥೆಗಳ ಒಕ್ಕೂಟ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖವಾಗಿದೆ.  

ಬೇಡಿಕೆ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿರುವುದರಿಂದ ವಾಹನ ಉತ್ಪಾದಕ ಸಂಸ್ಥೆಗಳು ಭಾರಿ ನಷ್ಟ ಅನುಭವಿಸುತ್ತಿವೆ. ಹೀಗಾಗಿ ವಾಹನೋದ್ಯಮದ ಚೇತರಿಕೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಾಹನ ತಯಾರಕ ಸಂಸ್ಥೆಗಳು ಕೇಂದ್ರಕ್ಕೆ ಈಗಾಗಲೇ ಮನವಿ ಮಾಡಿವೆ. ಇದರ ಜತೆಜತೆಗೇ ಉತ್ಪಾದಕ ಕ್ಷೇತ್ರದಲ್ಲಿ ಹಲವು ಕಂಪನಿಗಳು ನೌಕರಿ ಕಡಿತಗೊಳಿಸಿವೆ. 

ಚೇತರಿಕೆ ಕ್ರಮಕ್ಕೆ ಮನವಿ ಮಾಡಿರುವ ವಾಹನ ತಯಾರಕ ಸಂಸ್ಥೆಗಳಿಗೆ ಭರವಸೆ ನೀಡಿರುವ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ಪೆಟ್ರೋಲ್‌, ಡೀಸೆಲ್‌ ಮತ್ತು ಹೊಸ ಮಾದರಿಯ ವಾಹನಗಳ ಮೇಲಿನ ತೆರಿಗೆ ಕಡಿತಗೊಳಿಸುವಂತೆ ವಿತ್ತ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು