ಶನಿವಾರ, ಫೆಬ್ರವರಿ 27, 2021
23 °C

ಇಸ್ಕಾನ್‌ ರಥಯಾತ್ರೆ: ಸಂಸದೆ ನುಸ್ರತ್‌ ವಿಶೇಷ ಅತಿಥಿ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಟಿಎಂಸಿ ಸಂಸದೆ ಮತ್ತು ನಟಿ ನುಸ್ರತ್‌ ಜಹಾನ್‌ ಅವರು ಇಸ್ಕಾನ್‌ ರಥಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇಸ್ಕಾನ್‌ ನೀಡಿದ ಆಹ್ವಾನವನ್ನು ಒಪ್ಪಿಕೊಂಡಿರುವ ನುಸ್ರತ್‌ ಅವರಿಗೆ ಇಸ್ಕಾನ್‌ ವಕ್ತಾರ ರಾಧಾರಮಣ್‌ ದಾಸ್‌ ಧನ್ಯವಾದ ಸಲ್ಲಿಸಿದ್ದಾರೆ.

1971ರಿಂದ ಇಸ್ಕಾನ್ ರಥಯಾತ್ರೆ ಆಯೋಜಿಸುತ್ತಿದ್ದು, 48ನೇ ಯಾತ್ರೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉದ್ಘಾಟಿಸಲಿದ್ದಾರೆ. 

ನಗರದ ಅಲ್ಬರ್ಟ್‌ ರಸ್ತೆಯಲ್ಲಿರುವ ಇಸ್ಕಾನ್‌ ದೇವಾಲಯದಿಂದ ರಥಯಾತ್ರೆ ಪ್ರಾರಂಭವಾಗಲಿದ್ದು, ನಗರದ ಪ್ರಮುಖ ಮಾರ್ಗಗಳ ಮೂಲಕ ಸಾಗಿ ಬ್ರಿಗೇಡ್‌ ಪರೇಡ್‌ ಮೈದಾನ ತಲುಪಲಿದೆ. ಜುಲೈ 11ರವರೆಗೆ ಅಲ್ಲಿ ಕೃಷ್ಣನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ನುಸ್ರತ್‌ ಮತ್ತು ಅವರ ಪತಿ ಸೇರಿದಂತೆ ಹಲವು ಸಿನಿಮಾ ತಾರೆಯರು ರಥಯಾತ್ರೆಯ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

‘ನುಸ್ರುತ್‌, ಎಲ್ಲರ ಒಳಗೊಳ್ಳುವಿಕೆಯ ನವ ಭಾರತವನ್ನು ಪ್ರತಿನಿಧಿಸುತ್ತಾರೆ. ಅನ್ಯ ಧರ್ಮಗಳ ನಂಬಿಕೆಗಳನ್ನು ಗೌರವಿಸುವ ಜೊತೆಗೆ ಆ ಧರ್ಮದ ಉತ್ಸವಗಳಲ್ಲಿ ಭಾಗವಹಿಸುವುದರಿಂದ ಭಾರತ ಶ್ರೇಷ್ಠವಾಗಲಿದೆ. ದೇಶವು ಇದನ್ನೇ ಸೂಚಿಸುತ್ತದೆ. ನುಸ್ರುತ್‌ ಜಹಾನ್‌ ಅವರಂತಹ ಯುವಜನ ಮುಂದಿನ ಹಾದಿಯನ್ನು ತೋರಿಸುತ್ತಿದ್ದಾರೆ’ ಎಂದು ದಾಸ್‌ ಟ್ವೀಟ್‌ ಮಾಡಿದ್ದಾರೆ. 

ರಥಯಾತ್ರೆ ಸಾಮಾಜಿಕ ಸೌಹಾರ್ದಕ್ಕೆ ಉದಾಹರಣೆಯಾಗಿದೆ. ಕೃಷ್ಣನ ರಥವನ್ನು ಮುಸ್ಲಿಂ ಸಹೋದರರು ನಿರ್ಮಿಸಲಿದ್ದಾರೆ. ಕೃಷ್ಣನನ್ನು ಆಲಂಕರಿಸುವ ವಸ್ತ್ರಗಳನ್ನು ಮುಸ್ಲಿಂ ಸಹೋದರರೇ ಅನೇಕ ವರ್ಷಗಳಿಂದ ವಿನ್ಯಾಸ ಮಾಡುತ್ತಿದ್ದಾರೆ. ಜಗನ್ನಾಥ, ಬಲರಾಮ, ಹಾಗೂ ಸುಭದ್ರ ರಥ ಎಳೆಯಲಾಗುತ್ತಿದ್ದು, ಲಕ್ಷಾಂತರ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

ಜೈನ ಧರ್ಮದ ವ್ಯಕ್ತಿಯನ್ನು ವಿವಾಹವಾಗಿರುವ ನುಸ್ರುತ್‌, ಕುಂಕುಮ ಮತ್ತು ಮಂಗಳಸೂತ್ರ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದರಿಂದ ತೀವ್ರ ಟೀಕೆಗೆ ಒಳಗಾಗಿದ್ದರು. ‘ಒಳಗೊಳ್ಳುವಿಕೆಯ ಭಾರತದಲ್ಲಿ ನಾನಿದ್ದೇನೆ. ಜಾತಿ, ಧರ್ಮವನ್ನು ಮೀರುವುದು ಒಳಗೊಳ್ಳುವಿಕೆಯಾಗಿದೆ’ ಎಂದು ಹೇಳಿಕೆ ನೀಡಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು