ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮಿಯಾ ಬಳಿ ಗುಂಡು ಹಾರಿಸುವ ಮುನ್ನ ಫೇಸ್‌ಬುಕ್ ಲೈವ್‌ ಮಾಡಿದ್ದ ದಾಳಿಕೋರ

Last Updated 30 ಜನವರಿ 2020, 12:29 IST
ಅಕ್ಷರ ಗಾತ್ರ
ADVERTISEMENT
""
""

ನವದೆಹಲಿ:ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆನಡೆಸುತ್ತಿದ್ದವರಮೇಲೆ ಗುಂಡು ಹಾರಿಸಿದ್ದ ದುಷ್ಕರ್ಮಿ ಕೃತ್ಯವೆಸಗುವ ಮುನ್ನ ತನ್ನ ಎಲ್ಲ ಚಟುವಟಿಕೆಗಳನ್ನು ಫೇಸ್‌ಬುಕ್ ಲೈವ್‌ನಲ್ಲಿ ತೋರಿಸಿದ್ದಾನೆ.

ಪ್ರತಿಭಟನಕಾರರ ಮೇಲೆಗುಂಡು ಹಾರಿಸಿದ ವ್ಯಕ್ತಿಯನ್ನು ರಾಮ್‌ಭಕ್ತ್ ಗೋಪಾಲ್ ಎಂದು ಗುರುತಿಸಿದ್ದು, ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದಾದನಂತರ ಈತನ ಫೇಸ್‌ಬುಕ್ ಲೈವ್ ವಿಡಿಯೊ ವೈರಲ್ ಆಗಿದೆ.

ಹೆಸರು ರಾಮ್‌ಭಕ್ತ್ ಗೋಪಾಲ್. ಇಲ್ಲಿ ಇಷ್ಟು ಸಾಕು, ಬಾಕಿ ಉಳಿದಿರುವುದು ಸಮಯ ಬಂದಾಗ ಹೇಳುವೆ ಎಂದು ಈತ ತನ್ನ ಫೇಸ್‌ಬುಕ್ ಬಯೊದಲ್ಲಿ ಬರೆದುಕೊಂಡಿದ್ದಾನೆ.

ಈತನ ಫೇಸ್‌ಬುಕ್ ಪುಟದಲ್ಲಿ ಜಾಮಿಯಾ ಬಳಿ ನಡೆಯುತ್ತಿರುವ ಪ್ರತಿಭಟನೆಗಳ ಲೈವ್ ವಿಡಿಯೊಗಳಿವೆ. ಅದೇ ವೇಳೆ ಶಾಹೀನ್‌ಬಾಗ್ ಆಟ ಮುಗಿಯಿತು (ಶಾಹೀನ್‌ಬಾಗ್ ಖೇಲ್‌ಖತ್ಮ್ ) ಎಂದು ಬರೆದ ಪೋಸ್ಟ್ ಇಲ್ಲಿದೆ.


ಗುರುವಾರಒಂದರ ಹಿಂದೆ ಒಂದರಂತೆ ಸ್ಟೇಟಸ್ ಅಪ್‌ಡೇಟ್ ಮಾಡಿದ್ದ ಗೋಪಾಲ್, ಕರೆ ಮಾಡಬೇಡಿ, ನಾನೊಬ್ಬನೇ ಇಲ್ಲಿ ಹಿಂದೂ, ನನ್ನ ಕುಟುಂಬದವರನ್ನು ನೋಡಿಕೊಳ್ಳಿ, ಸ್ವಾತಂತ್ರ್ಯ ನೀಡುತ್ತಿದ್ದೇನೆ ಎಂದು ಫೇಸ್‌‌ಬುಕ್ ಸ್ಟೇಟಸ್ ಅಪ್‌ಡೇಟ್ ಮಾಡಿದ್ದಾನೆ. ಈತನ ಎಲ್ಲ ಪೋಸ್ಟ್‌ಗಳು ಹಿಂದಿಯಲ್ಲೇ ಇವೆ.

ದಾಳಿಕೋರ ರಾಮ್‌ಭಕ್ತ್ ಗೋಪಾಲ್‌ನ ಫೇಸ್‌ಬುಕ್ ಖಾತೆಯಲ್ಲಿರುವ ಪೋಸ್ಟ್, ವಿಡಿಯೊಗಳ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಖಾತೆ ಡಿಲೀಟ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT