ಭಾನುವಾರ, ಜನವರಿ 19, 2020
28 °C

ಪೌರತ್ವ ಮಸೂದೆ ವಿರೋಧಿಸಿ ಬೀದಿಗಿಳಿದ ಜಾಮಿಯಾ ವಿವಿ ವಿದ್ಯಾರ್ಥಿಗಳಿಗೆ ಪೊಲೀಸ್ ತಡೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

Police and students scuffle outside the Jamia Millia Islamia University during a protest against the Citizenship Amendment Bill in New Delhi

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಶುಕ್ರವಾರ ಸಂಸತ್‌ ಭವನಕ್ಕೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಪೊಲೀಸರು ತಡೆದಿದ್ದಾರೆ.

ಸಂಸತ್ ಭವನದ ಪರಿಸರದಲ್ಲಿ ಗುಂಪು ಸೇರುವುದನ್ನು ನಿರ್ಬಂಧಿಸಿದ್ದು, 50 ಮಂದಿ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ:  ಶಿಲ್ಲಾಂಗ್ ಭೇಟಿ ರದ್ದು ಮಾಡಿದ ಅಮಿತ್ ಶಾ

ವಿಶ್ವವಿದ್ಯಾನಿಲಯದ ಆವರಣದಿಂದ ವಿದ್ಯಾರ್ಥಿಗಳು ಮೆರವಣಿಗೆ ಆರಂಭ ಮಾಡುತ್ತಿದ್ದಂತೆ  ಪ್ರತಿಭಟನಕಾರರನ್ನು ಚದುರಿಸುವುದಕ್ಕಾಗಿ ದೆಹಲಿ ಪೊಲೀಸರು ಅಶ್ರು ವಾಯು ಮತ್ತು ಲಾಠಿ ಪ್ರಯೋಗ ನಡೆಸಿದ್ದಾರೆ.

ವಿದ್ಯಾರ್ಥಿಗಳು ಸಂಸತ್ತಿಗೆ ತಲುಪದಂತೆ ತಡೆಯಲು ದೆಹಲಿ ಮೆಟ್ರೊ ರೈಲು ಕಾರ್ಪರೇಷನ್  (ಡಿಎಂಆರ್‌ಸಿ)  ಪಟೇಲ್ ಚೌಕ್ ಮತ್ತು ಜನಪಥ್ ನಿಲ್ದಾಣವನ್ನು ಕೆಲವು ಗಂಟೆಗಳ ಕಾಲ ಮುಚ್ಚಿತ್ತು.

ಇದೀಗ ಈ ಎರಡೂ ನಿಲ್ದಾಣದಲ್ಲಿ ರೈಲು ಸಂಚಾರ ಪುನರಾರಂಭಗೊಂಡಿದೆ  ಡಿಎಂಆರ್‌ಸಿ ಟ್ವೀಟಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು