ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಪರಿಣಾಮಗಳೇನು?

Last Updated 5 ಆಗಸ್ಟ್ 2019, 11:40 IST
ಅಕ್ಷರ ಗಾತ್ರ

ನವದೆಹಲಿ:ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರದ ಪರಿಣಾಮಗಳೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

* ಈವರೆಗೆಕಾಶ್ಮೀರದ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಕ್ಷೇತ್ರಗಳ ಬಗ್ಗೆ ಮಾತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕಿತ್ತು. ಇನ್ನು ಮುಂದೆ ದೇಶದ ಇತರೆಲ್ಲ ರಾಜ್ಯಗಳಂತೆ ಜಮ್ಮು ಮತ್ತು ಕಾಶ್ಮೀರಕ್ಕೂ ಕೇಂದ್ರದ ಎಲ್ಲ ನಿಯಮ, ಕಾನೂನುಗಳು ಅನ್ವಯವಾಗಲಿವೆ

*ಸಂವಿಧಾನದ 370ನೇ ವಿಧಿ ಜತೆಗೆ35–ಎ ಕಲಂ ಸಹ ರದ್ದಾಗಲಿದೆ. ಜಮ್ಮು ಮತ್ತು ಕಾಶ್ಮೀರದವರಿಗೆಪ್ರತ್ಯೇಕ ನಾಗರಿಕತೆ ಇಲ್ಲವಾಗಲಿದೆ.

* ಪ್ರತ್ಯೇಕ ಧ್ವಜವೂ ಇಲ್ಲವಾಗಲಿದೆ

* ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿರುವುದರಿಂದ ಜಮ್ಮು ಮತ್ತು ಕಾಶ್ಮೀರದ ಕಾನೂನು ಸುವ್ಯವಸ್ಥೆಯ ಎಲ್ಲ ಜವಾಬ್ದಾರಿ ಕೇಂದ್ರ ಸರ್ಕಾರದ ಹಿಡಿತದಲ್ಲಿರಲಿದೆ

* ಕೇಂದ್ರಾಡಳಿತ ಪ್ರದೇಶವಾದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ದೆಹಲಿಯಂತೆ ಪ್ರತ್ಯೇಕ ಶಾಸಕಾಂಗ, ವಿಧಾನಸಭೆ ಮತ್ತು ಸರ್ಕಾರ ಇರಲಿದೆ

* ಲಡಾಖ್ ಕೂಡ ಕೇಂದ್ರಾಡಳಿತ ಪ್ರದೇಶವಾಗಲಿದೆ. ಆದರೆ ಇಲ್ಲಿ ಪ್ರತ್ಯೇಕ ಶಾಸಕಾಂಗ ಇರದೆ ನೇರ ಕೇಂದ್ರದ ಅಧೀನದಲ್ಲೇ ಇರಲಿದೆ

* ಜಮ್ಮು ಮತ್ತು ಕಾಶ್ಮೀರದ ಯುವತಿಯರು ಇತರ ರಾಜ್ಯದವರನ್ನು ಮದುವೆಯಾದರೂ ಯಾವುದೇ ಹಕ್ಕುಗಳನ್ನು ಕಳೆದುಕೊಳ್ಳುವುದಿಲ್ಲ. ಈವರೆಗೆ ಅವರುರಾಜ್ಯದ ಹೊರಗಿನವರನ್ನು ವಿವಾಹವಾದರೆ ವಿಶೇಷ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು

* ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸುವ ಬೇರೆ ರಾಜ್ಯದವರಿಗೂ ಅಲ್ಲಿ ಮತದಾನ ಹಕ್ಕಿಗೆ ಅವಕಾಶ ದೊರೆಯಲಿದೆ

* ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆ ಮಾಡಲು, ಉದ್ಯಮ ಸ್ಥಾಪಿಸಲು ಬೇರೆ ರಾಜ್ಯದವರಿಗೂ ಅವಕಾಶ ದೊರೆಯಲಿದೆ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT