ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರದ ಜಯಪ್ರದಾ- ದಕ್ಷಿಣದ ಸುಮಲತಾ ಇಬ್ಬರಿಗೂ ಸಾಮ್ಯತೆಗಳೇನು ಗೊತ್ತೇ?

Last Updated 9 ಮೇ 2019, 18:43 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದ ಇಬ್ಬರು ಮಹಿಳೆಯರು ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಚುನಾವಣಾ ಪ್ರಚಾರದಲ್ಲಿ ಧೂಳೆಬ್ಬಿಸುತ್ತಿದ್ದಾರೆ.ಅವರು ಯಾರು ಗೊತ್ತಾ, ಅವರೇ ಕವಿರತ್ನ ಕಾಳಿದಾಸನ ಪ್ರಿಯತಮೆ ಹಾಡಿನ ಮೋಹಕ ತಾರೆ ಹಾಗೂ ಮತ್ತೊಬ್ಬರು ರವಿಚಂದ್ರ ಚಿತ್ರದಲ್ಲಿ ಡಾ.ರಾಜ್ ಕುಮಾರ್‌ಗೆ ನಾಯಕಿಯಾಗಿದ್ದವರು.

ಇಬ್ಬರೂ ಒಂದೇ ವಯೋಮಾನದವರು. ಒಂದೇ ವರ್ಷ ಅಂದರೆ 1979ರಲ್ಲಿ ತೆಲುಗುಚಿತ್ರರಂಗಕ್ಕೆ ಕಾಲಿಟ್ಟವರು. ಒಬ್ಬರು ಕೇವಲ ₹10 ಸಂಭಾವನೆಗೆ ತಮ್ಮ ನಟನೆ ಆರಂಭಿಸಿದರೆ, ಮತ್ತೊಬ್ಬರು ₹1001 ಸಂಭಾವನೆಗೆ ನಟನೆ ಆರಂಭಿಸಿದವರು. ಇಬ್ಬರೂ ಬಹುಭಾಷಾ ನಟಿಯರು. ಈಗ ಒಬ್ಬರು ಉತ್ತರಪ್ರದೇಶದ ರಾಂಪುರ ಲೋಕಸಭಾ ಕ್ಷೇತ್ರದಲ್ಲಿಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಮತ್ತೊಬ್ಬರು ದಕ್ಷಿಣ ಭಾರತದ ಕರ್ನಾಟಕದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಇವರು ಬೇರಾರು ಅಲ್ಲ ಒಬ್ಬರು ಜಯಪ್ರದಾ ಮತ್ತೊಬ್ಬರು ಸುಮಲತಾ. ಹೌದು ಈ ಇಬ್ಬರು ನಟಿಯರ ಹಿನ್ನೆಲೆ ಗಮನಿಸಿದಾಗ ಇವರು ಬೆಳೆದ ಪರಿ ನಿಜಕ್ಕೂ ಅಚ್ಚರಿಯೇ ಸರಿ. ಆಂಧ್ರದ ಎಲ್ಲಾ ನಾಯಕಿಯರು ಈ ಮಟ್ಟಕ್ಕೆ ಏರಲಿಲ್ಲ. ಕೆಲವರು ಚಿತ್ರರಸಿಕರ ಪಾಲಿಗೆ ಕನಸಿನ ರಾಣಿಯರಾದರೂ ರಾಜಕೀಯವಾಗಿ ಇಷ್ಟೊಂದು ಧೂಳೆಬ್ಬಿಸಿರಲಿಲ್ಲ. 55 ವರ್ಷ ಮೀರಿದ್ದರೂ ಈ ಬಾರಿಯ ಚುನಾವಣೆಯಲ್ಲಿ ಚಟುವಟಿಕೆಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ.

ಜಯಪ್ರದಾ ಅವರ ಹಿನ್ನೆಲೆಯನ್ನು ನೋಡುವುದಾದರೆ, ಈಕೆ ಹುಟ್ಟಿದ್ದು ಏಪ್ರಿಲ್ 3, 1962. ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ. ತಂದೆ ಕೃಷ್ಣರಾವ್, ತಾಯಿ ನೀಲವೇಣಿ. ಹಣಕಾಸು ವ್ಯವಹಾರ ನಡೆಸುತ್ತಿದ್ದ ಕೃಷ್ಣರಾವ್ ತಮ್ಮ ಮಗಳು ಲಲಿತಾರಾಣಿಯನ್ನು ಸಂಗೀತ ಮತ್ತು ನೃತ್ಯದ ತರಗತಿಗೆ ಕಳುಹಿಸುತ್ತಿದ್ದರು. ಲಲಿತಾ ರಾಣಿ 13 ವರ್ಷದವಳಿದ್ದಾಗ ತನ್ನ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾಡಿದ ನೃತ್ಯ ತೆಲುಗು ನಿರ್ದೇಶಕರ ಗಮನ ಸೆಳೆಯಿತು. ಆ ನಂತರ ಆವರು ತಮ್ಮ ಸಿನಿಮಾದಲ್ಲಿ ನಿನಗೊಂದು ನೃತ್ಯದ ಸೀನ್ ಮಾಡಲು ಅವಕಾಶವಿದೆ ನಟಿಸುವೆಯಾ ಎಂದು ಕೇಳಿದರು. ಈ ವಿಷಯವನ್ನು ಬಾಲಕಿ ತನ್ನ ಮನೆಯವರಿಗೆ ತಿಳಿಸಿದ್ದಾಳೆ. ಆಗ ಮನೆಯವರು ಬಾಲಕಿಗೆ ಧೈರ್ಯ ತುಂಬಿ ಸಿನಿಮಾದಲ್ಲಿ ನಟಿಸು ಎಂದಿದ್ದಾರೆ. ಅಲ್ಲಿಗೆ ಭೂಮಿಕೋಸಂ ತೆಲುಗು ಸಿನಿಮಾದಲ್ಲಿ ನೃತ್ಯ ಮಾಡಿದ ಲಲಿತಾರಾಣಿ ನಿರ್ಮಾಪಕರಿಂದ ₹10ಸಂಭಾವನೆ ಪಡೆದಳು. ಆ ನಂತರ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರುಜಯಪ್ರದ ಎಂದು ಬದಲಾಯಿಸಿ ತೆಲುಗು ಚಿತ್ರದಲ್ಲಿ ನಾಯಕಿಯನ್ನಾಗಿ ಆಯ್ಕೆ ಮಾಡಿದರು. ನಂತರ ತಮಿಳು, ಮಲಯಾಳಂ, ಕನ್ನಡ, ಹಿಂದಿ, ಬೆಂಗಾಳಿ, ಮರಾಠಿ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿದರು.

ಆ ನಂತರ 1994ರಲ್ಲಿ ಆಂಧ್ರದ ತೆಲುಗುದೇಶಂ ಪಕ್ಷ ಸೇರ್ಪಡೆಗೊಳ್ಳುವ ಮೂಲಕರಾಜಕೀಯ ಪ್ರವೇಶಿಸಿದರು. ನಂತರ ಸಮಾಜವಾದಿ ಪಕ್ಷ ಸೇರ್ಪಡೆಗೊಂಡು ಎರಡು ಬಾರಿ ಸಂಸದೆಯಾಗಿದ್ದರು. ಈಗ ಸಮಾಜವಾದಿ ಪಕ್ಷವನ್ನು ತೊರೆದು ಅಮರ್ ಸಿಂಗ್ ಅವರ ಜೊತೆ ಸೇರಿ ಹೊಸ ಪಕ್ಷವನ್ನು ಕಟ್ಟಿದ್ದರು. ಪಕ್ಷ ಯಾವುದೇ ಚುನಾವಣೆಯಲ್ಲಿ ಗೆಲುವು ಸಾಧಿಸದ ಕಾರಣ ಜಯಪ್ರದ ಅಮರಸಿಂಗ್ ಪಕ್ಷವನ್ನುತೊರೆದುಬಿಜೆಪಿಯಿಂದ ಆಯ್ಕೆಬಯಸಿ ಉತ್ತರಪ್ರದೇಶದ ರಾಂಪುರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಹುಟ್ಟಿದ ದಿನವೇ ನಾಮಪತ್ರ

ಜಯಪ್ರದಾ ಏಪ್ರಿಲ್ 3ರಂದು ಹುಟ್ಟುಹಬ್ಬ ಆಚರಿಸಿಕೊಂಡು ಅಂದೇ ನಾಮಪತ್ರ ಸಲ್ಲಿಸಿದ್ದಾರೆ.ನಾಮಪತ್ರ ಸಲ್ಲಿಸುವ ಮುನ್ನ ತಮ್ಮ ಬೆಂಬಲಿಗರ ಜೊತೆಯಲ್ಲಿ ದೇವಸ್ಥಾನವೊಂದಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.ಬಿಜೆಪಿ ಪಕ್ಷದಿಂದ ಬಿ ಫಾರ್ಮ್ ಪಡೆದಿರುವ ಇವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಸುಮಲತಾ

ಮತ್ತೊಬ್ಬ ನಾಯಕಿ ಸುಮಲತಾ ಹುಟ್ಟಿದ್ದು ಆಗಸ್ಟ್ 27, 1963, ಆಂಧ್ರದಲ್ಲಿ 1979ರಲ್ಲಿನಡೆದಮಿಸ್ ಆಂಧ್ರ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದರು. ಆಗ ಸುಮಲತಾ ವಯಸ್ಸು 15 ವರ್ಷ. ಅಂದು ಆಂಧ್ರದ ಎಲ್ಲಾ ಪ್ರಮುಖ ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಸುಮಲತಾ ಅವರ ಭಾವಚಿತ್ರಗಳೇ ಮಿಂಚುತ್ತಿದ್ದವು. ಆ ಸಮಯದಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಡಿ.ರಾಮಾನಾಯ್ಡು ಸುಮಲತಾ ಅವರನ್ನು ಗಮನಿಸಿ ಅವರ ಪೂರ್ವಾಪರಗಳನ್ನು ವಿಚಾರಿಸಿದರು. ನಂತರತಮ್ಮ ಸಿನಿಮಾದಲ್ಲಿ ನಟಿಸುವಂತೆ ಹೇಳಿ ಅವಕಾಶ ನೀಡಿದರು. ಆ ನಟನೆಯಲ್ಲಿ ಸೈ ಎನಿಸಿಕೊಂಡ ಸುಮಲತಾ ಅವರಿಗೆ ನಿರ್ಮಾಪಕರು ನೀಡಿದ ಮೊದಲಸಂಭಾವನೆ ₹1001. ಅಲ್ಲಿಂದ ತಮಿಳು ಚಿತ್ರವೊಂದರಲ್ಲಿ ನಟಿಸುವ ಅವಕಾಶ ದೊರೆಯಿತು. ನಂತರ ಕನ್ನಡದ ರವಿಚಂದ್ರ, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ನಟಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ. ಈಗ ಸುಮಲತಾ ಸುಮಾರು 220 ಚಿತ್ರಗಳನ್ನು ಪೂರೈಸಿದ್ದಾರೆ.ಆ ಕಾಲದಲ್ಲಿಯೇ ನಾಯಕನಟನಾಗಿ ಕನ್ನಡಚಿತ್ರರಂಗದಲ್ಲಿ ಮಿಂಚುತ್ತಿದ್ದ ಅಂಬರೀಶ್ ಅವರನ್ನು ವಿವಾಹವಾಗುವ ಮೂಲಕ ಸುಮಲತಾ ಕರ್ನಾಟಕದಲ್ಲಿ ನೆಲೆಯೂರಿದರು.ಈಗ ಅಂಬರೀಶ್ ಅವರ ತವರು ಮಂಡ್ಯಜಿಲ್ಲೆಯಲ್ಲಿ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಬಿಜೆಪಿ ಇವರಿಗೆ ಬೆಂಬಲ ವ್ಯಕ್ತಪಡಿಸಿದೆ.

ಆ ಮೂಲಕ ಈ ಇಬ್ಬರೂ ಮಹಿಳೆಯರುಪ್ರಚಾರದಲ್ಲಿ ದೂಳೆಬ್ಬಿಸಿ ದೇಶದ ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT