ಮಂಗಳವಾರ, ಆಗಸ್ಟ್ 3, 2021
21 °C

ಬುಧವಾರ ರಾತ್ರಿಯಿಂದ ಜೆಟ್‌ ಏರ್‌ವೇಸ್‌ನ ಎಲ್ಲಾ ವಿಮಾನಗಳ ಹಾರಾಟ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ಬುಧವಾರ ರಾತ್ರಿಯಿಂದ ತಾತ್ಕಾಲಿಕವಾಗಿ ವಿಮಾನಗಳ ಹಾರಟವನ್ನು ರದ್ದುಗೊಳಿಸಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.  

ಇದನ್ನೂ ಓದಿ: ಜೆಟ್‌ ಬಿಕ್ಕಟ್ಟು– ಕಾಣದ ಪರಿಹಾರ 

ಜೆಟ್‌ ಏರ್‌ವೇಸ್‌ನ ವಿಮಾನ ಸೇವೆಗಳಲ್ಲಿ ಅಡಚಣೆ ಉಂಟಾಗುವುದನ್ನು ತಪ್ಪಿಸಲು ಜೆಟ್‌ ಏರ್‌ವೇಸ್‌ ಸಂಸ್ಥೆ ಎಸ್‌ಬಿಐ ನೇತೃತ್ವದಲ್ಲಿನ 26 ಬ್ಯಾಂಕ್‌ಗಳ ಒಕ್ಕೂಟದಿಂದ ತುರ್ತು ಹಣಕಾಸು ನೆರವು ಕೋರಿತ್ತು. ತುರ್ತಾಗಿ ₹ 400 ಕೋಟಿ ನೀಡುವಂತೆ ಮನವಿ ಮಾಡಿತ್ತು. 

ಇದನ್ನೂ ಓದಿ: ಜೆಟ್ ಏರ್‌ವೇಸ್ ಸಂಸ್ಥೆ ಚೇರ್ಮನ್ ಹುದ್ದೆಗೆ ನರೇಶ್ ಗೋಯಲ್ ರಾಜೀನಾಮೆ

ಆದರೆ ಎಸ್‌ಬಿಐ ನೇತೃತ್ವದಲ್ಲಿನ ಬ್ಯಾಂಕ್‌ಗಳು ತುರ್ತಾಗಿ ₹400 ಕೋಟಿ ನೀಡಲು ನಿರಾಕರಿಸಿರುವುದರಿಂದ ಜೆಟ್‌ ಏರ್‌ವೇಸ್‌ ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ಇಂದು ರಾತ್ರಿಯಿಂದ ನಿಲ್ಲಿಸಲಿದೆ. 

ಇವನ್ನೂ ಓದಿ

 ಜೆಟ್‌ ಏರ್‌ವೇಸ್‌– ಬಿಡ್‌ ಆಹ್ವಾನ 

ಜೆಟ್‌ ಟೇಕ್‌ಆಫ್‌ ಮತ್ತು ನರೇಶ್ ಶಸ್ತ್ರತ್ಯಾಗ

ಜೆಟ್ ಏರ್‌ವೇಸ್ ಬಿಕ್ಕಟ್ಟು ಮತ್ತಷ್ಟು ಕಗ್ಗಂಟು? ಪ್ರಧಾನಿ ಕಚೇರಿಯಿಂದ ತುರ್ತು ಸಭೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು