ಶನಿವಾರ, ಜನವರಿ 18, 2020
27 °C
ಜಾರ್ಖಂಡ್‌: ಕೊನೆಯ ಹಂತದಲ್ಲಿ 16 ಕ್ಷೇತ್ರಗಳಿಗೆ ಶೇ 71 ಮತದಾನ

ಬಿಜೆಪಿ ಗೆಲುವು ಕಷ್ಟ, ಕಾಂಗ್ರೆಸ್ ಮೈತ್ರಿ ಗೆಲುವು ಸ್ಪಷ್ಟ : ಮತಗಟ್ಟೆ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಂಚಿ: ಜಾರ್ಖಂಡ್‌ ವಿಧಾನಸಭಾ ಚುನಾವಣೆಯ ಐದನೇ ಹಂತದ ಮತದಾನವು ಶುಕ್ರವಾರ ನಡೆದಿದೆ. ಆ ಮೂಲಕ, ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಮುಕ್ತಾಯವಾದಂತಾಗಿದೆ. ಡಿ. 23ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳು ವಿರಳ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

ಇಂಡಿಯಾ ಟುಡೆ–ಆಕ್ಸಿಸ್‌ ಮೈ ಇಂಡಿಯಾ ಸಂಸ್ಥೆಯವರು ಮಾಡಿರುವ ಸಮೀಕ್ಷೆ ಪ್ರಕಾರ ಜೆಎಂಎಂ–ಕಾಂಗ್ರೆಸ್‌ ಮೈತ್ರಿಯು ಸರಳ ಬಹುಮತ ಪಡೆದು ಸರ್ಕಾರ ರಚಿಸಲಿದೆ. ಆದರೆ ಐಎಎನ್‌ಎಸ್‌–ಸಿ ವೋಟರ್– ಎಬಿಪಿ ಸಮೀಕ್ಷೆಯು ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದಿದೆ.

81 ಸದಸ್ಯಬಲದ ಜಾರ್ಖಂಡ್ ವಿಧಾನಸಭೆಗೆ ಈ ಬಾರಿ ಐದು ಹಂತಗಳಲ್ಲಿ ಮತದಾನ ಹಮ್ಮಿಕೊಳ್ಳಲಾಗಿತ್ತು. ನ. 30ಕ್ಕೆ ಮೊದಲ ಹಂತದಮತದಾನ ನಡೆದಿತ್ತು. 16 ವಿಧಾನಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿದೆ. ಕೊನೆಯ ಹಂತದ ಮತದಾನಕ್ಕೆ ಒಳಗಾದ ಕ್ಷೇತ್ರಗಳು ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು