ಮಂಗಳವಾರ, ಜನವರಿ 28, 2020
21 °C

ಕಾಶಿ ವಿಶ್ವನಾಥ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಬೇಕಾದರೆ ಭಕ್ತರು ವಸ್ತ್ರಸಂಹಿತೆ ಅನುಸರಿಸುವುದು ಕಡ್ಡಾಯವಾಗಲಿದೆದೆ. ಹಿರಿಯ ವಿದ್ವಾಂಸರ ಸಲಹೆಯನ್ನು ಆಧರಿಸಿ ದೇವಾಲಯದ ಆಡಳಿತ ಮಂಡಳಿಯು ಈ ನೂತನ ನಿಯಮವನ್ನು ಜಾರಿಗೆ ತರಲು ಚರ್ಚೆ ನಡೆಸಲಾಗಿದೆ.‌

ಆದರೆ ಕಡ್ಡಾಯಗೊಳಿಸುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಸ್ಪರ್ಶಿಸಬೇಕಾದರೆ ಪುರುಷರು ಕುರ್ತ– ಧೋತಿ ಮತ್ತು ಮಹಿಳೆಯರು ಸೀರೆ ಧರಿಸುವುದು.ವಿಭಿನ್ನ ಉಡುಪುಗಳನ್ನು ಧರಿಸಿದವರು ದೇವಾಲಯದ ಅಂಗಳದವರೆಗೆ ಪ್ರವೇಶಿಸಲು ಅವಕಾಶ ನೀಡುವಂತೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು