ಶನಿವಾರ, ಡಿಸೆಂಬರ್ 7, 2019
22 °C

ಆಪ್‌ ಸರ್ಕಾರದಿಂದ ಉಚಿತ ಯಾತ್ರಾ ಯೋಜನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಮುಖ್ಯಮಂತ್ರಿ ತೀರ್ಥ ಯಾತ್ರೆ ಯೋಜನೆ’ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಬುಧವಾರ ಚಾಲನೆ ನೀಡಿದರು.

70 ವಿಧಾನಸಭಾ ಕ್ಷೇತ್ರಗಳ 1,100 ಹಿರಿಯ ನಾಗರಿಕರು ಈ ಯೋಜನೆಯ ಅನುಕೂಲ ಪಡೆಯಬಹುದು. 

ಈ ಯೋಜನೆ ಅನುಸಾರ 60 ವರ್ಷದವರು ತಮ್ಮ ಪತಿ ಅಥವಾ ಪತ್ನಿಯೊಂದಿಗೆ ಉಚಿತ ಯಾತ್ರೆ ಕೈಗೊಳ್ಳಬಹುದು.  

ಅರ್ಜಿದಾರರ ಸಂಗಾತಿ 70 ವರ್ಷ ಮೇಲ್ಪಟ್ಟಿದ್ದರೆ ಅವರೊಂದಿಗೆ 20 ವರ್ಷದವರನ್ನು ಕರೆದುಕೊಂಡು ಹೋಗುವ ಅವಕಾಶವನ್ನು ಒದಗಿಸಲಾಗಿದೆ. 

ಎರಡು ಹಗಲು, ಮೂರು ಯಾತ್ರೆ ಕೈಗೊಳ್ಳಬಹುದು. ಕಳೆದ ಜುಲೈ ತಿಂಗಳಲ್ಲಿ ಈ ಯೋಜನೆಗೆ ಆಪ್‌ ಸರ್ಕಾರ ಅನುಮೋದನೆ ನೀಡಿದೆ. ಸರ್ಕಾರ ಪ್ರತಿ ವರ್ಷ ಈ ಯೋಜನೆಗೆ ₹ 77 ಸಾವಿರ ಭರಿಸಲಿದೆ. ಸರ್ಕಾರಿ ನೌಕರರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. 

‘ಹಿರಿಯರಿಗೆ ಗೌರವ ನೀಡದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು