ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈವರೆಗೆ ಭಾರತಕ್ಕೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷರಿವರು...

Last Updated 24 ಫೆಬ್ರುವರಿ 2020, 7:12 IST
ಅಕ್ಷರ ಗಾತ್ರ
ADVERTISEMENT
""

ಐಸೆನ್‌ಹೋವರ್ (1959)

ಭಾರತಕ್ಕೆಭೇಟಿನೀಡಿದಅಮೆರಿಕಅಧ್ಯಕ್ಷರ‍ಪೈಕಿ ಡ್ವೈಟ್ ಡಿ. ಐಸೆನ್‌ಹೋವರ್‌ ಮೊದಲಿಗರು. ಆ ಸಮಯದಲ್ಲಿ ಜವಾಹರಲಾಲ್‌ ನೆಹರೂ ಪ್ರಧಾನಿಯಾಗಿದ್ದರು. ಅಲಿಪ್ತ ಚಳವಳಿಯನ್ನು (ಎನ್‌ಎಎಂ) ಮುನ್ನಡೆಸುತ್ತಿದ್ದ ಭಾರತವು ಯುಎಸ್‌ಎಸ್‌ಆರ್ ಪರವಾಗಿದೆ ಎಂಬ ಅಭಿಪ್ರಾಯ ಅಮೆರಿಕನ್ನರಲ್ಲಿ ಇದ್ದ ಸಮಯದಲ್ಲಿ ಈಭೇಟಿನಡೆದಿತ್ತು.ಐಸೆನ್‌ಹೋವರ್ ಅವರು ಕಮ್ಯುನಿಸ್ಟ್ ವಿರೋಧಿ ಒಕ್ಕೂಟಕ್ಕೆ ಪಾಕಿಸ್ತಾನವನ್ನು ಸೇರಿಸಿಕೊಂಡು, ಅದಕ್ಕೆ ಸೇನಾ ನೆರವು ನೀಡಿದ್ದರು. ಹೀಗಾಗಿಭಾರತ–ಅಮೆರಿಕಬಾಂಧವ್ಯ ಅಷ್ಟೇನೂ ಉತ್ತಮವಾಗಿರಲಿಲ್ಲ.

ರಿಚರ್ಡ್ ನಿಕ್ಸನ್ (1969)

ಭಾರತಹಾಗೂ ಪಾಕಿಸ್ತಾನದ ಸಂಬಂಧದ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ರಿಚರ್ಡ್ ನಿಕ್ಸನ್ ಅವರು ಇಂದಿರಾ ಗಾಂಧಿ ಅವರನ್ನು ಭೇಟಿಯಾಗಿದ್ದರು. ಕೇವಲ 23 ಗಂಟೆ ಅವಧಿಯ ಅವರ ಭೇಟಿಯು ತರಾತುರಿಯಿಂದ ಕೂಡಿತ್ತು. ಇಂದಿರಾ ಗಾಂಧಿ ಮತ್ತು ನಿಕ್ಸನ್ ನಡುವೆ ಅಷ್ಟೇನೂ ಸ್ನೇಹಪರತೆ ಕಂಡುಬಂದಿರಲಿಲ್ಲ.

ಜಿಮ್ಮಿ ಕಾರ್ಟರ್ (1978)

ಭಾರತದಲ್ಲಿ ಜಿಮ್ಮಿ ಕಾರ್ಟರ್‌ಗೆ ಐತಿಹಾಸಿಕ ಸ್ವಾಗತ ಸಿಕ್ಕಿತು. ಮೂರು ದಿನಗಳ ಅಧಿಕೃತ ಪ್ರವಾಸದಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರನ್ನುಭೇಟಿಮಾಡಿದ್ದರು. ಪರಮಾಣು ಪರೀಕ್ಷೆ ಮಾಡುವಭಾರತದ ಮಹತ್ವಾಕಾಂಕ್ಷೆ ಅಂದು ವಿವಾದ ಸೃಷ್ಟಿಸಿತ್ತು. ಮೊರಾರ್ಜಿ ಅವರಿಗೆ ಕಠಿಣ ಸಂದೇಶ ನೀಡಬೇಕು ಎಂದು ಜಿಮ್ಮಿ ಅವರು ತಮ್ಮ ಸಹಾಯಕರ ಬಳಿ ಹೇಳಿದ್ದ ಟೇಪ್ ಬಹಿರಂಗವಾಗಿತ್ತು. ನಿಶ್ಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಬೇಕೆಂಬ ಅಭಿಪ್ರಾಯವನ್ನು ಮೊರಾರ್ಜಿ ಪರಿಗಣಿಸಿರಲಿಲ್ಲ

ಬಿಲ್ ಕ್ಲಿಂಟನ್ (2000)

ಮಾಧ್ಯಮಗಳಲ್ಲಿ ಇನ್ನಿಲ್ಲದಂತೆ ಕುತೂಹಲ ಸೃಷ್ಟಿಸಿದ್ದು ಬಿಲ್ ಕ್ಲಿಂಟನ್ಭಾರತಭೇಟಿ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜತೆ ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಅವರು, ಉಭಯ ದೇಶಗಳ ಹೊಸ ಬಾಂಧವ್ಯವನ್ನು ಪ್ರಸ್ತಾಪಿಸಿದ್ದರು. ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಮಧ್ಯಪ್ರವೇಶಿಸಿ, ಪಾಕ್ ಪಡೆಗಳನ್ನು ವಾಪಸ್ ಪಡೆಯುವಂತೆ ನವಾಜ್ ಷರೀಫ್‌ಗೆ ಸೂಚಿಸಿದ್ದರು. ಅಮೆರಿಕದ ಪಾಕ್ ಪರವಾದ ನಿಲುವು ಬದಲಾಗಿದ್ದು ಇಲ್ಲಿಂದ.

ಜಾರ್ಜ್ ಬುಷ್ (2006)

ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಜಾರ್ಜ್ ಬುಷ್ ಅವರು ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಸೇನಾ ಹಾಗೂ ನಾಗರಿಕ ಬಳಕೆಯನ್ನು ಪ್ರತ್ಯೇಕಗೊಳಿಸಲಾಯಿತು. ಬುಷ್ ಅವರ ಮುಕ್ತ ಹಾಗೂ ನೇರ ನಿಲುವಿನಿಂದಾಗಿ ಪರಮಾಣು ವಿಚಾರದಲ್ಲಿಭಾರತದ ಏಕಾಂಗಿತನ ಈ ಮೂಲಕ ಕೊನೆಗೊಂಡಿತು.

ಬರಾಕ್ ಒಬಾಮ (2010)

ಭಾರತಹಾಗೂಅಮೆರಿಕನಡುವಿನ ಆರ್ಥಿಕ ಒಪ್ಪಂದಗಳು ಬಲಗೊಂಡಿದ್ದು ಬರಾಕ್ ಒಬಾಮ ಅವರ ಭೇಟಿಯ ಸಮಯದಲ್ಲಿ. ಈ ಪೈಕಿ ರಕ್ಷಣೆ, ರಫ್ತು ಹಾಗೂ ಬಂಡವಾಳ ಹೂಡಿಕೆ ಮುಖ್ಯವಾದವು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ವತ್ವ ಪಡೆಯುವಭಾರತದ ಮಹತ್ವಕಾಂಕ್ಷೆಯನ್ನು ಒಬಾಮ ಬೆಂಬಲಿಸಿದ್ದರು. 2015ರಲ್ಲಿ ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಎರಡನೇ ಭಾರಿಭೇಟಿನೀಡಿದ್ದ ಅವರು, 66ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT