ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ದ್ವಿಗುಣಗೊಂಡ ಗೂಡ್ಸ್‌ ರೈಲುಗಳ ವೇಗ

Last Updated 6 ಮೇ 2020, 10:52 IST
ಅಕ್ಷರ ಗಾತ್ರ

ನವದೆಹಲಿ: ಹಳಿಗಳ ಮೇಲೆ ತೆವಳುವ ರೈಲುಗಳು ಎಂಬ ಹಣೆಪಟ್ಟಿ ಹೊಂದಿದ್ದಗೂಡ್ಸ್‌ ರೈಲುಗಳು ಇದೀಗವೇಗದ ರೈಲುಗಳಾಗಿ ಬದಲಾಗಿವೆ!

ಲಾಕ್‌ಡೌನ್‌ ಪರಿಣಾಮ ಸರಕು ಸೇವೆಯ ಗೂಡ್ಸ್‌ ರೈಲುಗಳು ವೇಗ ಹೆಚ್ಚಿಸಿಕೊಂಡಿದ್ದು, ಇದು ಸಾಮಾನ್ಯ ವೇಗಕ್ಕಿಂತ ದುಪ್ಪಟ್ಟು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ವಿವಿಧ ರೈಲ್ವೇ ವಲಯಗಳಲ್ಲಿ ಗೂಡ್ಸ್‌ ರೈಲುಗಳು ವೇಗ ದ್ವಿಗುಣಗೊಂಡಿರುವುದು ದಾಖಲಾಗಿದೆ. ಸಾಮಾನ್ಯವಾಗಿ ಈ ರೈಲುಗಳು ಗಂಟೆಗೆ 24 ಕಿ. ಮೀ. ವೇಗದಲ್ಲಿ ಚಲ್ಲಿಸುತ್ತವೆ. ಆದರೆ ಲಾಕ್‌ಡೌನ್‌ ಪರಿಣಾಮ ಪ್ರಯಾಣಿಕರ ರೈಲುಗಳು ಸ್ಥಗಿತಗೊಂಡಿದ್ದರಿಂದ ಗೂಡ್ಸ್‌ ರೈಲುಗಳ ವೇಗ ದ್ವಿಗುಣಗೊಂಡಿದೆ. ಸರಾಸರಿ ಶೇ 66 ರಷ್ಟು ಹೆಚ್ಚಳವಾಗಿದೆ ಎಂದು ರೈಲ್ವೇ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಲಾಕ್‌ಡೌನ್‌ಗಿಂತ ಮೊದಲು ಗಂಟೆಗೆ 24 ಕೀ.ಮೀಟರ್‌ ವೇಗದಲ್ಲಿ ಚಲಿಸುತ್ತಿದ್ದ ಸರುಕು ಸೇವೆಯ ರೈಲುಗಳು ಲಾಕ್‌ಡೌನ್‌ ಬಳಿಕ 54 ಕಿ.ಮೀಟರ್‌ ವೇಗದಲ್ಲಿ ಚಲಿಸಿವೆ. ಏಪ್ರಿಲ್‌ 27ಕ್ಕೆ ಕೊನೆಗೊಂಡಂತೆ, ಪೂರ್ವ ಕೇಂದ್ರೀಯ ರೈಲ್ವೆ ವ್ಯಾಪ್ತಿಯ ಗೂಡ್ಸ್‌ ರೈಲುಗಳು ಗಂಟೆಗೆ 53 ಕಿ.ಮೀ. ವೇಗದಲ್ಲಿ ಚಲಿಸಿವೆ.

ಕೊಂಕಣ ರೈಲ್ವೆಯ ಗೂಡ್ಸ್‌ ರೈಲುಗಳು 54 ಕಿ.ಮೀ, ಉತ್ತರ ಕೇಂದ್ರ ವಲಯದ ರೈಲುಗಳು 46, ದಕ್ಷಿಣ ಕೇಂದ್ರ ವಲಯದ ರೈಲುಗಳು 39 ಹಾಗೂ ಪಶ್ಚಿಮ ರೈಲ್ವೆ ವಲಯದ ರೈಲುಗಳು 43 ಕಿ. ಮೀ. ವೇಗದಲ್ಲಿ ಚಲಿಸಿವೆ. ಈ ರೈಲುಗಳು ಸಾಮಾನ್ಯವಾಗಿ 22 ರಿಂದ 25 ಕಿ.ಮೀಟರ್ ವೇಗದಲ್ಲಿ ಚಲಿಸುತ್ತಿದ್ದವು.

ಕಳೆದ ವರ್ಷದ ಮಾರ್ಚ್‌–ಏಪ್ರಿಲ್‌ಗೆ ಹೋಲಿಸಿದರೆ ಈ ವರ್ಷ ಗೂಡ್ಸ್‌ ರೈಲುಗಳ ವೇಗದಲ್ಲಿ ಶೇ 66 ರಷ್ಟು ಹೆಚ್ಚಳವಾಗಿದೆ.

ಲಾಕ್‌ಡೌನ್‌ ಪರಿಣಾಮ ಪ್ರಯಾಣಿಕ ರೈಲುಗಳ ಓಡಾಟ ಇಲ್ಲದಿರುವುದು ಹಾಗೂ ಅಗತ್ಯ ವಸ್ತುಗಳನ್ನು ತ್ವರಿತವಾಗಿ ತಲುಪಿಸುವ ಸಲುವಾಗಿ ವೇಗದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ರೈಲ್ವೆ ಇಲಾಖೆಯ ವಕ್ತಾರರಾದ ಆರ್.ಡಿ. ಬಾಜಪೈ ತಿಳಿಸಿದ್ದಾರೆ.

ಏಪ್ರಿಲ್‌ 1ರಿಂದ 16ರವರೆಗೂ 32 ಲಕ್ಷ ಟನ್‌ ಆಹಾರ ಸಾಮಗ್ರಿಗಳನ್ನು ಸಾಗಾಟ ಮಾಡಲಾಗಿದೆ. 2019ರ ಇದೇ ವೇಳೆಗೆ 12.9 ಲಕ್ಷ ಟನ್‌ ಆಹಾರ ಸರಕುಗಳನ್ನು ಸಾಗಣೆ ಮಾಡಲಾಗಿತ್ತು. ಏಪ್ರಿಲ್‌ 1ರಿಂದ 16ರ ವರೆಗೂ ಅಗತ್ಯ ವಸ್ತುಗಳನ್ನು ಸಾಗಾಣಿಕೆ ಮಾಡಿರುವುದು ದಾಖಲೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT