ಬೆಂಗಳೂರು: ಮೇ 3ರ ವರೆಗೂ ವಿಸ್ತರಿಸಲಾಗಿರುವ ಲಾಕ್ಡೌನ್ ಅವಧಿಯಲ್ಲಿ ದೇಶದ ನಾಗರೀಕರು ಹಾಗೂ ರಾಜ್ಯ ಸರ್ಕಾರಗಳಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬುಧವಾರ ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ ನಿನ್ನೆ ಸಪ್ತ ಅಂಶಗಳನ್ನು ನೀಡಿ, ಅವುಗಳನ್ನು ಪಾಲಿಸುವಂತೆ ಮನವಿ ಮಾಡಿದರು. ಬಡವರು, ಕಾರ್ಮಿಕ ವರ್ಗಕ್ಕೆ ಅನುವಾಗುವ ನಿಟ್ಟಿನಲ್ಲಿ ಕೆಲವು ಸಡಿಲಿಕೆಗಳನ್ನು ಏಪ್ರಿಲ್ 20ರ ನಂತರ ತರುವುದಾಗಿ ಸರ್ಕಾರ ಹೇಳಿದೆ.

ಆದರೆ, ಸರ್ಕಾರ ಇನ್ನೂ ಅವಕಾಶ ನೀಡದಿರುವ ಹಾಗೂ ನಿರ್ಬಂಧ ಮುಂದುವರಿಸಿರುವ ಪಟ್ಟಿ ಇಲ್ಲಿದೆ:

* ಶವ ಸಂಸ್ಕಾರ ಕಾರ್ಯಗಳಲ್ಲಿ 20ಕ್ಕಿಂತಲೂ ಹೆಚ್ಚು ಜನ ಸೇರುವಂತಿಲ್ಲ

* ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಮಾನ ಸೇವೆಗಳು; ಭದ್ರತೆ ಹಾಗೂ ಆರೋಗ್ಯ ತುರ್ತು ಹೊರತು ಪಡಿಸಿ

* ಸಾರ್ವಜನಿಕ ಬಸ್ ಸಂಚಾರ ವ್ಯವಸ್ಥೆ

* ಮೆಟ್ರೊ ರೈಲು ಹಾಗೂ ಭಾರತೀಯ ರೈಲ್ವೆ ಪ್ರಯಾಣಿಕ ರೈಲುಗಳು

* ಆರೋಗ್ಯ ಕಾರಣಗಳಿಗೆ ಹೊರತು ಪಡಿಸಿ, ವೈಯಕ್ತಿಕ ಸಂಚಾರ. ಜಿಲ್ಲೆಯಿಂದ ಜಿಲ್ಲೆಗೆ ಹಾಗೂ ಅಂತರರಾಜ್ಯ ಪ್ರಯಾಣ

* ಎಲ್ಲ ಶೈಕ್ಷಣಿಕ, ತರಬೇತಿ ಹಾಗೂ ವಿದ್ಯಾ ಸಂಸ್ಥೆಗಳು ಮುಚ್ಚಿರಲಿವೆ

* ಎಲ್ಲ ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳು (ವಿಶೇಷವಾಗಿ ಅನುಮತಿ ನೀಡಿರುವುದು ಹೊರತು ಪಡಿಸಿ)

* ಆತಿಥ್ಯ ಸೇವೆಗಳು (ವಿಶೇಷವಾಗಿ ಅನುಮತಿ ನೀಡಿರುವುದು ಹೊರತು ಪಡಿಸಿ)

* ಆಟೊರಿಕ್ಷಾಗಳು, ಸೈಕಲ್ ರಿಕ್ಷಾಗಳು ಸೇರಿದಂತೆ ಟ್ಯಾಕ್ಸಿ ಹಾಗೂ ಕ್ಯಾಬ್ ಸೇವೆಗಳು

* ಚಿತ್ರಮಂದಿರಗಳು, ಮಾಲ್ಗಳು, ಶಾಪಿಂಗ್ ಕಾಂಪ್ಲೆಕ್ಸ್ಗಳು, ಜಿಮ್ನಾಶಿಯಂಗಳು, ಸ್ಪೋರ್ಟ್ಸ್ ಕಾಂಪ್ಲೆಕ್ಸ್ಗಳು, ಈಜುಕೊಳಗಳು, ಮನರಂಜನಾ ಪಾರ್ಕ್ಗಳು, ರಂಗಮಂದಿರಗಳು, ಬಾರ್ಗಳು, ಆಡಿಟೋರಿಯಂಗಳು, ಸಭೆ ಮತ್ತು ಸಮಾರಂಭ ಸ್ಥಳಗಳು ಮುಚ್ಚಿರಲಿವೆ

* ಎಲ್ಲ ಸಭೆ ಸಮಾರಂಭಗಳು; ಸಾಮಾಜಿಕ/ ರಾಜಕೀಯ / ಸಾಂಸ್ಕೃತಿಕ/ ಧಾರ್ಮಿಕ/ ಮನರಂಜನಾ ಕಾರ್ಯಕ್ರಮಗಳು

* ಧಾರ್ಮಿಕ ಸ್ಥಳಗಳು, ಕೇಂದ್ರಗಳು ಅಥವಾ ಪ್ರಾರ್ಥನಾ ಮಂದಿರಗಳು ಸಾರ್ವಜನಿಕರಿಗೆ ತೆರೆದಿರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.