ಬುಧವಾರ, ಸೆಪ್ಟೆಂಬರ್ 22, 2021
29 °C

ಲಾಕ್‌ಡೌನ್: ಮನೆ ಮನೆಯಲ್ಲೇ ರಂಜಾನ್ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ಸೋಂಕು ಹರಡದಂತೆ ದೇಶದಾದ್ಯಂತ ಲಾಕ್‌‌ಡೌನ್ ಜಾರಿಯಲ್ಲಿರುವ ಕಾರಣ ರಂಜಾನ್ ಸಂದರ್ಭದ ಪ್ರಾರ್ಥನೆ ಹಾಗೂ 'ಸಹಾರಿ'ಯನ್ನು ಜನರು ತಮ್ಮ ತಮ್ಮ ಮನೆಯಲ್ಲೇ ಸಲ್ಲಿಸಿದ್ದಾರೆ.

ರಂಜಾನ್ ಸಮಯದಲ್ಲಿ ಅಂತರ ಕಾಯ್ದುಕೊಳ್ಳುವುದು, ಕೊರೊನಾ ಹರಡದಂತೆ ತಡೆಯುವುದು ಅನಿವಾರ್ಯವಾಗಿರುವ ಕಾರಣ ಗುಂಪುಗೂಡಿ ಪ್ರಾರ್ಥನೆ ಸಲ್ಲಿಸದಂತೆ ಸರ್ಕಾರ ಆದೇಶದಲ್ಲಿ ತಿಳಿಸಿದೆ. ಈ ಕಾರಣದಿಂದಾಗಿ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ
ಪ್ರಾರ್ಥನೆ ನಿಷೇಧಿಸಲಾಗಿದೆ. 

ದೆಹಲಿಯ ಇಂದರ್ ಲೋಕದ ನಿವಾಸಿ ಮಹಮದ್ ಸಲೀಮ್, ಕೊರೊನಾ ಸೋಂಕು ಹರಡದಂತೆ ಲಾಕ್ ಡೌನ್ ಜಾರಿಗೆ ತಂದಿರುವ ಕಾರಣ ನಾವು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದ್ದೇವೆ, ಸೋಂಕು ಹರಡದಂತೆ ಜಾಗೃತೆ ವಹಿಸುವುದು ಮುಖ್ಯವಾಗಿರುವುದರಿಂದ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು. 


ದೆಹಲಿಯಲ್ಲಿ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದ ಸಲೀಂ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು