ಫ್ರಾನ್ಸ್: ತೆರಿಗೆ ವಿನಾಯಿತಿ ಭರವಸೆ ನೀಡಿದ ಮ್ಯಾಕ್ರನ್

ಪ್ಯಾರಿಸ್: ಇಡೀ ಫ್ರಾನ್ಸ್ ಅನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿರುವ ಪ್ರತಿಭಟನೆ ಕುರಿತು ಮಂಗಳವಾರ ಮೌನ ಮುರಿದಿರುವ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್, ಕಾರ್ಮಿಕರು ಹಾಗೂ ಪಿಂಚಣಿದಾರರಿಗೆ ತೆರಿಗೆ ವಿನಾಯಿತಿ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.
ಜನರ ಆಕ್ರೋಶ ಕುರಿತು ಪ್ರತಿಕ್ರಿಯಿಸಿರುವ ಅವರು ‘ನಾನು ಹೊಣೆ ಹೊರುತ್ತೇನೆ. ನನ್ನ ಮಾತುಗಳಿಂದ ಜನರಿಗೆ ನೋವುಂಟಾಗಿರಬಹುದು’ ಎಂದು ಟಿ.ವಿ ಸಂದೇಶದಲ್ಲಿ ಹೇಳಿದ್ದಾರೆ.
ಮುಂದಿನ ವರ್ಷಾರಂಭದಿಂದ ಕಾರ್ಮಿಕರ ಕನಿಷ್ಠ ವೇತನದಲ್ಲಿ 100 ಯುರೊ ಹೆಚ್ಚಳ, ಹೆಚ್ಚುವರಿ ಕಾರ್ಯಾವಧಿ ನಿರ್ವಹಿಸಿದ್ದಕ್ಕೆ ನೀಡುವ ವೇತನದ ಮೇಲಿನ ತೆರಿಗೆ ರದ್ದುಗೊಳಿಸುವುದು, ಲಾಭದಲ್ಲಿರುವ ಕಂಪನಿಗಳು ಉದ್ಯೋಗಿಗಳಿಗೆ ತೆರಿಗೆ ರಹಿತ ವರ್ಷಾಂತ್ಯದ ಬೋನಸ್ ನೀಡುವುದು ಸೇರಿದಂತೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿ ಅವರು ಪ್ರತಿಭಟನಾಕಾರರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಅಲ್ಲದೆ, ಸಣ್ಣ ಮೊತ್ತದ ಪಿಂಚಣಿ ಮೇಲೆ ತೆರಿಗೆ ಹೆಚ್ಚಳ ಮಾಡಿದ ಕ್ರಮ ‘ಅನ್ಯಾಯ’ ಎನ್ನುವುದನ್ನು ಒಪ್ಪಿಕೊಂಡಿರುವ ಅವರು, ಇದನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ.
‘ಆರ್ಥಿಕ ಮತ್ತು ಸಾಮಾಜಿಕ ತುರ್ತು ಪರಿಸ್ಥಿತಿ’ ಘೋಷಿಸಿದ್ದ ಮ್ಯಾಕ್ರನ್, ಸರ್ಕಾರ ಮತ್ತು ಸಂಸತ್ತು ತೆರಿಗೆ ನಿಯಮ ಬದಲಾವಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನವೆಂಬರ್‌ನಲ್ಲಿ ಆದೇಶಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.