ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಂ ಸ್ಟಂಟ್ ಮಾಡಿದ ಸಬ್–ಇನ್‌ಸ್ಪೆಕ್ಟರ್: ₹5,000 ದಂಡ, ಅಧಿಕಾರಿಗಳಿಂದ ಛೀಮಾರಿ

Last Updated 12 ಮೇ 2020, 6:51 IST
ಅಕ್ಷರ ಗಾತ್ರ

ದಮೋಹ್‌: ಪೊಲೀಸ್‌ ಇಲಾಖೆಯಲ್ಲಿ ಅಸಾಧಾರಣ ಸಾಧನೆ ತೋರಿದ ಅಧಿಕಾರಿಗಳ ಹೆಸರಿನೊಂದಿಗೆ ಮಾಧ್ಯಮಗಳ ವರದಿಗಳಿಂದಾಗಿ 'ಸಿಂಗಂ' ತಳುಕು ಹಾಕಿಕೊಳ್ಳುತ್ತದೆ. ಹೆಸರಿನೊಂದಿಗೆ ಸಿಂಗಂ ಅಂಟಿಕೊಂಡಿರದ ಪೊಲೀಸ್‌ ಸಬ್‌–ಇನ್‌ಸ್ಪೆಕ್ಟರ್‌ ಒಬ್ಬರು, ಸಿಂಗಂ ಸಿನಿಮಾದಲ್ಲಿ ಅಜಯ್‌ ದೇವಗನ್‌ ಮಾಡಿದಂತೆಯೇ ಸ್ಟಂಟ್‌ ಮಾಡಿ ₹5,000 ದಂಡ ತೆತ್ತಿದ್ದಾರೆ.

ಮಧ್ಯ ಪ್ರದೇಶದ ದಮೋಹ್‌ ಜಿಲ್ಲೆಯ ನರಸಿಂಗಗಢ ಪೊಲೀಸ್‌ ಠಾಣೆಯ ಸಬ್‌–ಇನ್‌ಸ್ಪೆಕ್ಟರ್‌ ಮನೋಜ್‌ ಯಾದವ್‌ ಡೇರ್‌ಡೆವಿಲ್‌ ಸಾಹಸ ಮಾಡಿದ್ದರು. ಸಿನಿಮಾದಲ್ಲಿರುವಂತೆ ಹಲವು ದೃಶ್ಯಗಳನ್ನು ಯಥಾವತ್ತು ಸ್ಟಂಟ್‌ಗಳೊಂದಿಗೆ ಚಿತ್ರೀಕರಿಸಿಕೊಂಡಿದ್ದರು.

ಎರಡು ಕಾರುಗಳ ಮೇಲೆ ನಿಂತು ಸವಾರಿ ಮಾಡಿರುವುದು, ಕಾರು ಚಲಿಸುತ್ತಿದ್ದಂತೆ ಸನ್‌ ಗ್ಲಾಸ್‌ ಹಾಕಿಕೊಂಡು ಫೋಸ್‌ ಕೊಟ್ಟಿರುವುದು ವಿಡಿಯೊದಲ್ಲಿ ದಾಖಲಾಗಿದೆ. ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಹಿರಿಯ ಅಧಿಕಾರಿಗಳ ಗಮನ ಸೆಳೆದಿದೆ. ಯುವಕರಿಗೆ ಇದು ತಪ್ಪು ಸಂದೇಶ ತಲುಪಿಸುತ್ತದೆ ಎಂಬ ಕಾರಣಕ್ಕೆ ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದರು.

ಐಜಿ ಅನಿಲ್‌ ಶರ್ಮಾ ಅವರು ಎಸ್ಪಿ ಹೇಮಂತ್‌ ಚೌಹಾಣ್‌ ಅವರಿಗೆ ತನಿಖೆ ನಡೆಸುವಂತೆ ಆದೇಶಿಸಿದ್ದರು. ತನಿಖೆಯ ಬಳಿಕ ಹೇಮಂತ್‌ ಚೌಹಾಣ್, ಸಬ್‌–ಇನ್‌ಸ್ಪೆಕ್ಟರ್‌ಗೆ ಕಠಿಣ ಎಚ್ಚರಿಕೆ ನೀಡುವ ಜೊತೆಗೆ ₹5,000 ದಂಡ ವಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT