ಶನಿವಾರ, ಮೇ 15, 2021
26 °C

ಮದ್ಯದಂಗಡಿ ಮುಚ್ಚಲು ಮದ್ರಾಸ್ ಹೈಕೋರ್ಟ್ ಆದೇಶ: ಆನ್‌ಲೈನ್ ವಹಿವಾಟಿಗೆ ಅವಕಾಶ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಚೆನ್ನೈ: ಮದ್ರಾಸ್ ಹೈಕೋರ್ಟ್ ಶುಕ್ರವಾರ ಲಾಕ್‌ಡೌನ್‌ ನಿರ್ಬಂಧ ಸಂಪೂರ್ಣ ತೆರವು ಮಾಡುವವರೆಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಆದರೆ, ಆನ್‌ಲೈನ್‌ ಮಾರಾಟಕ್ಕೆ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ವಿನೀತ್ ಕೊಠಾರಿ ಮತ್ತು ಪುಷ್ಪಾ ಸತ್ಯನಾರಾಯಣ ಅವರಿದ್ದ ವಿಶೇಷ ವಿಭಾಗೀಯ ಈ ಆದೇಶ ಹೊರಡಿಸಿದೆ. ಮದ್ಯದ ಅಂಗಡಿಗಳನ್ನು ತೆರೆಯಲು ನ್ಯಾಯಾಲಯ ವಿಧಿಸಿದ್ದ ನಿರ್ಬಂಧಗಳು ಸಾರಾಸಗಟಾಗಿ ಉಲ್ಲಂಘನೆಯಾದ ಕಾರಣ ಇಂಥ ಆದೇಶ ಹೊರಡಿಸಬೇಕಾಯಿತು ಎಂದು ನ್ಯಾಯಪೀಠ ಹೇಳಿದೆ.

ಅಂಗಡಿಗಳ ಎದುರು ಅಂತರ ಕಾಪಾಡುವುದೂ ಸೇರಿದಂತೆ ಸುರಕ್ಷತೆಯ ನಿಯಮಗಳು ಉಲ್ಲಂಘನೆಯಾಗುತ್ತಿವೆ ಎಂದು ಹಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.


ತಮಿಳುನಾಡಿನಲ್ಲಿ ಮದ್ಯ ಸಿಕ್ಕವರ ಸಂಭ್ರಮ

ಮೇ 4ರಂದು ತಮಿಳುನಾಡು ಸರ್ಕಾರವು ಸರ್ಕಾರಿ ಆದೇಶವೊಂದನ್ನು ಹೊರಡಿಸಿ ಮೇ 7ರಿಂದ ಮದ್ಯದ ಅಂಗಡಿಗಳನ್ನು ತೆರೆಯುವುದಾಗಿ ಹೇಳಿತ್ತು. ಮದ್ಯದ ಅಂಗಡಿಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕು, ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.

ಸರ್ಕಾರದ ಆದೇಶವನ್ನು ಹಲವು ವಕೀಲರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಮೇ 6ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಮದ್ಯ ಮಾರಾಟ ಆದೇಶಕ್ಕೆ ತಡೆನೀಡಲು ನಿರಾಕರಿಸಿ, ಹಲವು ನಿಯಮಗಳನ್ನು ವಿಧಿಸಿತ್ತು.

ನಗದು ರೂಪದಲ್ಲಿ ಹಣ ಪಾವತಿಸುವ ಗ್ರಾಹಕನಿಗೆ ಒಂದು ದಿನಕ್ಕೆ ಕೇವಲ 750 ಎಂಎಲ್ ಮದ್ಯ ಮಾರಬೇಕು ಎಂದೂ ನ್ಯಾಯಲಯ ಸರ್ಕಾರಕ್ಕೆ ಆದೇಶಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು