ಶುಕ್ರವಾರ, ಜೂನ್ 25, 2021
20 °C

ರೈತರಿಗೆ ₹10 ಸಾವಿರ ಕೋಟಿ ನೆರವು: ಫಡಣವೀಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಅಕಾಲಿಕ ಮಳೆಯಿಂದಾಗಿ ನಷ್ಟ ಅನುಭವಿಸಿದ ರೈತರಿಗೆ ₹10 ಸಾವಿರ ಕೋಟಿಯ ತಕ್ಷಣದ ನೆರವನ್ನು ಮಹಾರಾಷ್ಟ್ರ ಸರ್ಕಾರ ಶನಿವಾರ ಘೋಷಿಸಿದೆ.

ರೈತರು ಅನುಭವಿಸಿದ ನಷ್ಟದ ಕುರಿತು ಅವರ ಗೃಹ ಕಚೇರಿಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಈ ನಿರ್ಧಾರ ಕೈಗೊಂಡರು.

325 ತಾಲ್ಲೂಕುಗಳಲ್ಲಿ ಹರಡಿಕೊಂಡಿರುವ 54.22 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.

ಬಿಜೆಪಿಯ ಸಚಿವರು ಮತ್ತು ಮಿತ್ರಪಕ್ಷಗಳ ಸಚಿವರು ಸಭೆಯಲ್ಲಿದ್ದರು. ಜಲ ಸಂಪನ್ಮೂಲ ಮತ್ತು ಜನ ಸಂರಕ್ಷಣೆ ರಾಜ್ಯ ಸಚಿವ, ವಿಜಯ್‌ ಶಿವತಾರೆ ಒಬ್ಬರೇ ಶಿವಸೇನೆಯಿಂದ ಸಭೆಯಲ್ಲಿ ಭಾಗವಹಿಸಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು