ಭಾನುವಾರ, ಜೂಲೈ 12, 2020
29 °C

ಕೇರಳ: ನೋಟ್‌ಬುಕ್‌ನಲ್ಲಿ ಆರೋಗ್ಯ ಕಾರ್ಯಕರ್ತರ ರೇಖಾಚಿತ್ರ ಹಾಕುವ ಮೂಲಕ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೇರಳ: ಕೋವಿಡ್‌ 19ರ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರನ್ನು ಗೌರವಿಸಲು ಕೇರಳದ ಮಲ್ಲಾಪುರಂ ಜಿಲ್ಲೆಯ ಶಾಲೆಯೊಂದು ಆರೋಗ್ಯ ಕಾರ್ಯಕರ್ತರ ರೇಖಾಚಿತ್ರಗಳಿರುವ ನೋಟ್‌ಬುಕ್‌ಗಳನ್ನು ಸಿದ್ಧಪಡಿಸಿದೆ. 

ವಾಲನ್‌ಚೆರಿಯ ಸಮೀಪದ ವೆಂಗಾಡ್‌ನಲ್ಲಿರುವ ಟಿಆರ್‌ಕೆಎ ಯುಪಿ ಶಾಲೆಯು ಮಕ್ಕಳಿಗೆ ಆರೋಗ್ಯ ಕಾರ್ಯಕರ್ತರ ತ್ಯಾಗವನ್ನು ಅರ್ಥ ಮಾಡಿಸಲು ಈ ಕ್ರಮವನ್ನು ಕೈಗೊಂಡಿದೆ.

ಸದ್ಯಕ್ಕೆ ಆರೋಗ್ಯ ಕಾರ್ಯಕರ್ತರ ರೇಖಾಚಿತ್ರಗಳ ಮುಖಪುಟವಿರುವ 500 ನೋಟ್‌ಬುಕ್‌ಗಳನ್ನು ಹೊರತಂದಿದೆ. ಇದರಲ್ಲಿ ಪ್ರಮುಖವಾಗಿ ನಿಫಾ ಸಾಂಕ್ರಾಮಿಕ ಬಿಕ್ಕಟ್ಟಿನಲ್ಲಿ ಕರ್ತವ್ಯದಲ್ಲಿದ್ದಾಗಲೇ ಪ್ರಾಣ ತೆತ್ತ ದಾದಿ ಲಿನಿ ಅವರ ರೇಖಾಚಿತ್ರವಿದೆ.  ಕಲಾವಿದರಾದ ಒ.ಸಿ. ಮಾರ್ಟಿನ್‌ ಹಾಗೂ ಸುಮೇಶ್‌ ಈ ಎಲ್ಲ ಚಿತ್ರಗಳನ್ನು ರಚಿಸಿದ್ದಾರೆ. ಅಂತರ ಕಾಯ್ದುಕೊಳ್ಳುವ ಬಗ್ಗೆಯೂ ಸಂದೇಶಗಳನ್ನು ಮುಖಪುಟದಲ್ಲಿ ನೀಡಲಾಗಿದೆ. 

ಶಾಲೆಯ ಪ್ರಾಂಶುಪಾಲ ಪಿ.ಕೆ.ಸುಭಾಶ್‌ ಹೇಳುವಂತೆ, ‘ ಬಡ ಕುಟುಂಬದಿಂದ ಮಕ್ಕಳಿಗೆ ಈ ಪುಸ್ತಕಗಳನ್ನು ಹಂಚಲಾಗುವುದು. ಶಾಲೆಗಳು ಆರಂಭಗೊಂಡಿದ್ದರೆ, ಭಿನ್ನ ಕಾರ್ಯಕ್ರಮದ ಮೂಲಕ ಆರೋಗ್ಯ ಕಾರ್ಯಕರ್ತರಿಗೆ ಗೌರವ ಸಲ್ಲಿಸಬಹುದಿತ್ತು’ ಎಂದು ತಿಳಿಸಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು