ಕಾಂಗ್ರೆಸ್‌ನದ್ದು ಜಾತಿವಾದಿ ಮನಸ್ಥಿತಿ; ಅದರೊಟ್ಟಿಗೆ ಮೈತ್ರಿಯಿಲ್ಲ: ಮಾಯಾವತಿ

ಭಾನುವಾರ, ಮಾರ್ಚ್ 24, 2019
34 °C

ಕಾಂಗ್ರೆಸ್‌ನದ್ದು ಜಾತಿವಾದಿ ಮನಸ್ಥಿತಿ; ಅದರೊಟ್ಟಿಗೆ ಮೈತ್ರಿಯಿಲ್ಲ: ಮಾಯಾವತಿ

Published:
Updated:

ಲಖನೌ: ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವು(ಬಿಎಸ್‌ಪಿ) ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಯಾವುದೇ ರಾಜ್ಯಗಳಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಸಾಧ್ಯವಿಲ್ಲ ಎಂದಿರುವ ಮಾಯಾವತಿ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಏಕಾಂಗಿ ಹೋರಾಟ ನಡೆಸುವ ಪಣ ತೊಟ್ಟಿದ್ದಾರೆ. 

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮಾಯಾವತಿ, ಬಿಜೆಪಿಯನ್ನು ಮಟ್ಟಹಾಕಲು ಈಗಾಗಲೇ ಹಲವು ಕಸರತ್ತುಗಳನ್ನು ನಡೆಸುತ್ತಿರುವ ಕಾಂಗ್ರೆಸ್, ಬಿಎಸ್‌ಪಿಯನ್ನು ಸಹ ನಾಶಪಡಿಸಲು ಹೊಂಚು ಹಾಕಿದೆ ಎಂದು ಆರೋಪಿಸಿದ್ದಾರೆ. 

ಕಾಂಗ್ರೆಸ್‌ನದ್ದು ಜಾತಿವಾದಿ ಮನಸ್ಥಿತಿ. ಕೆಲವು ಪಕ್ಷದ ಮುಖಂಡರಿಗೂ ಅವರೊಟ್ಟಿಗೆ ಮೈತ್ರಿ ಮಾಡಿಕೊಳ್ಳಲು ಆಸಕ್ತಿಯಿಲ್ಲ. ಮಧ್ಯಪ್ರದೇಶದಲ್ಲಿ 230 ಸ್ಥಾನಗಳಿದ್ದು, ಇದರಲ್ಲಿ ಕೇವಲ 15 ರಿಂದ 20 ಸ್ಥಾನ, ಇನ್ನು ಚತ್ತೀಸಗಡದಲ್ಲಿ 90 ಸ್ಥಾನಗಳ ಪೈಕಿ 5 ಸ್ಥಾನಗಳನ್ನಷ್ಟೇ ಬಿಎಸ್‌ಪಿಗೆ ನೀಡುವ ಇಂಗಿತವನ್ನು ಕಾಂಗ್ರೆಸ್‌ ಹೊಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ದುರಹಂಕಾರದ ಕಾಂಗ್ರೆಸ್, ಬಿಜೆಪಿಯನ್ನು ಸೋಲಿಸುವ ಭ್ರಮೆಯಲ್ಲಿದೆ. ಆದರೆ, ಇದು ಈ ಹಿಂದೆ ಮಾಡಿರುವ ತಪ್ಪುಗಳನ್ನು, ಭ್ರಷ್ಟಾಚಾರವನ್ನು ಜನರು ಮರೆತಿಲ್ಲ ಎಂಬುದು ವಾಸ್ತವದ ಸಂಗತಿ. ಅಲ್ಲದೆ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ನಡೆಯಲು ಅದು ತಯಾರಿಲ್ಲ ಎಂದು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 16

  Happy
 • 4

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !