ಶನಿವಾರ, ಡಿಸೆಂಬರ್ 7, 2019
22 °C

ಶಾಲೆಗಳಲ್ಲಿ ಸೈಬರ್ ಭದ್ರತೆ ಕೈಪಿಡಿ ವಿತರಿಸುವಂತೆ ಸಚಿವರಿಗೆ ಸೂಚಿಸಿದ ಕೇಂದ್ರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಮಕ್ಕಳಿಗೆ ಸೈಬರ್ ಭದ್ರತೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸೈಬರ್‌ ಸುರಕ್ಷತೆ ಕುರಿತು ಮಾಹಿತಿ ನೀಡುವ ಕೈಪಿಡಿಗಳನ್ನು ಶಾಲೆಗಳಲ್ಲಿ ವಿತರಿಸುವಂತೆ ಹಲವು ಸಚಿವರಿಗೆ ಸೂಚಿಸಿದ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.

ರೈಲ್ವೆ, ರಕ್ಷಣೆ, ಮಾನವ ಸಂಪನ್ಮೂಲ ಇಲಾಖೆಯ ಸಚಿವರುಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿನ ಮಕ್ಕಳಿಗೆ ಕೈಪಿಡಿಗಳನ್ನು ವಿತರಿಸುವಂತೆ ಸೂಚನೆ ನೀಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

13 ವರ್ಷ ವಯಸ್ಸಿನ ಮಕ್ಕಳಿಗಾಗಿ ಸೈಬರ್‌ ಭದ್ರತೆ ಕುರಿತ ಕೈಪಿಡಿಗಳನ್ನು ಸಚಿವಾಯಲವು ರಚಿಸಿದ್ದು, ಸೈಬರ್‌ ಬೆದರಿಕೆ ಹಾಗೂ ರಕ್ಷಣೆಗಳ ಕುರಿತ ಮಾಹಿತಿಯನ್ನು ಒಳಗೊಂಡಿದೆ. ಇದರಿಂದ ಸೈಬರ್‌ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.

ಆತಂಕ ಸೃಷ್ಟಿಸುವ ಸುಳ್ಳು ಸುದ್ದಿಗಳು, ವಂಚನೆಯ ಸಂದೇಶಗಳನ್ನು ನಿರ್ವಹಿಸಲು ಕೈಪಿಡಿಯು ನೆರವಾಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು