ಭಾನುವಾರ, ಜೂಲೈ 5, 2020
28 °C

ಶವವಾಗಿ ಮಲಗಿದ ಅಮ್ಮನನ್ನು ಎಬ್ಬಿಸುತ್ತಿರುವ ಕಂದ; ಮನಕಲಕುವ ವಿಡಿಯೊ ವೈರಲ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

video grab

ಪಟನಾ: ಬಿಹಾರ ರೈಲು ನಿಲ್ದಾಣದಲ್ಲಿ ಸಾವಿಗೀಡಾಗಿರುವ ಅಮ್ಮನನ್ನು ಪುಟ್ಟ ಮಗುವೊಂದು ಎಬ್ಬಿಸಲು ಪ್ರಯತ್ನಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಅಮ್ಮನ ದೇಹದ ಮೇಲಿರುವ ಹೊದಿಕೆಯನ್ನು ಎಳೆದು ಆ ಮಗು ಅಮ್ಮನನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವ ದೃಶ್ಯ ಮನಕಲಕುವಂತಿದೆ. ಅಧಿಕ ಶಾಖ, ಹಸಿವು ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದುದ್ದೇ ಆಕೆಯ ಸಾವಿಗೆ ಕಾರಣ ಎಂದು ಕುಟುಂಬದವರು ಹೇಳಿದ್ದಾರೆ.

ಬಿಹಾರದ ಮುಜಾಫರ್‌ಪುರ್ ರೈಲು ನಿಲ್ದಾಣಕ್ಕೆ ಸೋಮವಾರ ಬಂದಿಳಿದ ವಲಸೆ ಕಾರ್ಮಿಕರ ವಿಶೇಷ ರೈಲಿನಲ್ಲಿ 23ರ ಹರೆಯದ ಈ ಮಹಿಳೆ ಬಂದಿದ್ದರು. ಅದೇ ನಿಲ್ದಾಣದಲ್ಲಿ 2 ವರ್ಷದ ಮಗು ಕೂಡಾ ಸಾವಿಗೀಡಾಗಿದೆ. ಅಧಿಕ ಶಾಖ ಮತ್ತು ಸರಿಯಾದ ಆಹಾರ ಸಿಗದೆ ಮಗು ಸಾವಿಗೀಡಾಗಿತ್ತು.

ಸರಿಯಾಗಿ ಆಹಾರ, ನೀರು ಸಿಗದೆ ಮಹಿಳೆ ಅಸ್ವಸ್ಥಳಾಗಿದ್ದಳು. ಶನಿವಾರ ಈಕೆ ಗುಜರಾತಿನ ಅಹಮದಾಬಾದ್‌ನಿಂದ ರೈಲು ಹತ್ತಿದ್ದಳು. ಸೋಮವಾರ ಮುಜಾಫರ್‌ಪುರ್‌ಗೆ ರೈಲು ಹೊರಡುವುದಕ್ಕಿಂತ ಸ್ವಲ್ಪ ಮುಂಚೆ ಈಕೆ ಕೊನೆಯುಸಿರೆಳೆದಳು ಎಂದು ಆಕೆಯ ಕುಟುಂಬದವರು ಹೇಳಿದ್ದಾರೆ. 

ರೈಲು ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಆಕೆಯ ಮೃತದೇಹವಿರಿಸಿದ್ದು, ಇದು ಯಾವುದೂ ಗೊತ್ತೇ ಇಲ್ಲದ ಪುಟ್ಟ ಮಗು ಅಮ್ಮನನ್ನು ಎಬ್ಬಿಸಲು ಪ್ರಯತ್ನಿಸುತ್ತಿತ್ತು. ರೈಲಿಗೆ ಹತ್ತುವ ಮುನ್ನವೇ ಆಕೆ ಅಸ್ವಸ್ಥಳಾಗಿದ್ದಳು. ಆಕೆ ಸಾವಿಗೀಡಾದ ಕಾರಣ ಆ ಕುಟುಂಬ ಮುಜಾಫರ್‌ಪುರ್ ನಿಲ್ದಾಣದಲ್ಲಿ ಇಳಿದಿತ್ತು. ಸಹೋದರಿ, ಸಹೋದರಿಯ ಗಂಡ ಮತ್ತು ಇಬ್ಬರು  ಮಕ್ಕಳೊಂದಿಗೆ ಆಕೆ ಕತಿಹಾರ್‌ಗೆ ಪ್ರಯಾಣಿಸುತ್ತಿದ್ದಳು ಎಂದು ರೈಲ್ವೆ ಸಚಿವಾಲಯ ಹೇಳಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು