ಬುಧವಾರ, ಆಗಸ್ಟ್ 4, 2021
20 °C

ಉತ್ತರ ಪ್ರದೇಶ: ಮನೆಗೆ ಮರಳಿದ ವಲಸೆ ಕಾರ್ಮಿಕ ಆತ್ಮಹತ್ಯೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಆತ್ಮಹತ್ಯೆ–ಪ್ರಾತಿನಿಧಿಕ ಚಿತ್ರ

ಬಲಿಯಾ: ಲಾಕ್‌ಡೌನ್‌ನಿಂದ ಉತ್ತರಾಖಂಡದಲ್ಲಿ ಸಿಲುಕಿದ್ದ 30 ವರ್ಷ ವಯಸ್ಸಿನ ವಲಸೆ ಕಾರ್ಮಿಕ ಗುರುವಾರ ಉತ್ತರ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ತಿಂಗಳಷ್ಟೇ ತನ್ನ ಊರಿಗೆ ಮರಳಿದ್ದ ಅಂಜನಿ ಕುಮಾರ್‌ ಸಿಂಗ್‌ ಮರಕ್ಕೆ ಹಗ್ಗ ಬಿಗಿದು ನೇಣು ಹಾಕಿಕೊಂಡಿದ್ದಾರೆ. ಅವರ ಕುಟುಂಬ ಸದಸ್ಯರ ಪ್ರಕಾರ, ಹಣಕಾಸು ಬಿಕ್ಕಟ್ಟು ಆತನನ್ನು ಪ್ರಾಣ ಕಳೆದುಕೊಳ್ಳುವಂತೆ ಮಾಡಿದೆ.

ಉತ್ತರಾಖಂಡದ ಹರಿದ್ವಾರದ ಕಂಪನಿಯೊಂದರಲ್ಲಿ ಸಿಂಗ್‌ ಕಾರ್ಯನಿರ್ವಹಿಸುತ್ತಿದ್ದರು. ಹದಿನೈದು ದಿನಗಳ ಹಿಂದಷ್ಟೇ ಮಠ ಯೋಗೇಂದ್ರ ಗಿರಿ ಗ್ರಾಮದ ತನ್ನ ಮನೆಗೆ ಹಿಂದಿರುಗಿದ್ದರು. ದೇಹವನ್ನು ಶವ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು