ಶನಿವಾರ, ಜುಲೈ 24, 2021
27 °C
ಮೂರನೇ ಸುತ್ತಿನ ಸಮೀಕ್ಷೆ: ಇನ್ನೂ ಮುಗಿದಿಲ್ಲ ಸಂಕಷ್ಟ

63% ವಲಸೆ ಕಾರ್ಮಿಕರಲ್ಲಿ ₹100 ಕೂಡ ಉಳಿದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಕೆಲಸ ಬಿಟ್ಟು ಊರಿಗೆ ಮರಳಿದ ವಲಸೆ ಕಾರ್ಮಿಕರು ಈಗಲೂ ಸಂಕಷ್ಟದಲ್ಲಿದ್ದಾರೆ. ಇಂಥವರಲ್ಲಿ ಮೂರನೇ ಒಂದರಷ್ಟು ಮಂದಿ ಆಹಾರಧಾನ್ಯದ ಕೊರತೆ ಎದುರಿಸುತ್ತಿದ್ದರೆ, ಶೇ 63ರಷ್ಟು ಮಂದಿ ‘ನಮ್ಮ ಜೇಬಿನಲ್ಲಿ ₹100 ಕೂಡ ಉಳಿದಿಲ್ಲ’ ಎಂದು ಹೇಳಿದ್ದಾರೆ.

ಸ್ವಾನ್‌ (ಸ್ಟ್ರಾಂಡೆಡ್‌ ವರ್ಕರ್ಸ್ ಆ್ಯಕ್ಷನ್‌ ನೆಟ್‌ವರ್ಕ್‌) ಸಂಸ್ಥೆಯವರು ನಡೆಸಿದ ಮೂರನೇ ಸುತ್ತಿನ ಸಮೀಕ್ಷೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ತಮ್ಮ ಯಾತನೆಯನ್ನು ವಿವರಿಸಿ ವಲಸೆ ಕಾರ್ಮಿಕರಿಂದ ಬಂದಿರುವ 5,911 ಕರೆಗಳಲ್ಲಿ 821ನ್ನು ವಿಶ್ಲೇಷಣೆಗೆ ಒಳಪಡಿಸಿ ಮತ್ತು ಮೇ 15ರಿಂದ ಜೂನ್‌ 1ರೊಳಗಿನ ಅವಧಿಯಲ್ಲಿ 1,963 ಕಾರ್ಮಿಕರ ಜತೆ ಸಂವಾದ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ.

* ಬಹಳಷ್ಟು ವಲಸೆ ಕಾರ್ಮಿಕರು ಬಸ್‌ ಮತ್ತು ಶ್ರಮಿಕ ರೈಲುಗಳ ಮೂಲಕ ಊರಿಗೆ ಮರಳಿದ್ದಾರೆ. ಶೇ 11ರಷ್ಟು ಮಂದಿ ಟ್ರಕ್‌ ಅಥವಾ ಇತರ ವಾಹನಗಳ ಮೂಲಕ ಮತ್ತು ಶೇ 6ರಷ್ಟು ಮಂದಿ ಕಾಲ್ನಡಿಗೆಯಲ್ಲೇ ಹೋಗಿದ್ದಾರೆ.

* 68 ದಿನಗಳ ಲಾಕ್‌ಡೌನ್‌ನ ಮೊದಲ ಭಾಗದಲ್ಲಿ ವಲಸೆ ಕಾರ್ಮಿಕರು ಆಹಾರ, ಹಣ ಇಲ್ಲದೆ ಸಂಕಷ್ಟಪಟ್ಟರೆ ದ್ವಿತೀಯ ಭಾಗದಲ್ಲಿ ಊರಿಗೆ ಮರಳುವ ಯಾತ್ರೆಯ ಯಾತನೆ ಅನುಭವಿಸಿದ್ದರು.

* ಆರ್ಥಿಕ ಚಟುವಟಿಕೆಗಳು ಪುನಃ ಆರಂಭವಾಗಿರುವುದರಿಂದ ವಲಸಿಗರು ಊರಿಗೆ ಮರಳುತ್ತಿಲ್ಲ ಎಂಬ ಕಾರಣಕ್ಕೆ ಶ್ರಮಿಕ ರೈಲುಗಳನ್ನು ರದ್ದು ಮಾಡುವುದಾಗಿ ಸರ್ಕಾರ ಹೇಳಿದೆ. ಆದರೆ ಶೇ 55ರಷ್ಟು ಕಾರ್ಮಿಕರು ಈಗಲೂ ಊರಿಗೆ ಮರಳಲು ಉತ್ಸುಕರಾಗಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು