ಶುಕ್ರವಾರ, ಜೂನ್ 5, 2020
27 °C

ಲೈಟ್ ಆಫ್ ಮಾಡೋದ್ರಿಂದ ವಿದ್ಯುತ್ ಪ್ರಸರಣ ಸಮಸ್ಯೆಯಾಗಲ್ಲ: ಇಂಧನ ಸಚಿವಾಲಯ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಏಕ ಕಾಲದಲ್ಲಿ ಜನರು ವಿದ್ಯುತ್ ದೀಪಗಳನ್ನು ಆರಿಸಿ, ಉರಿಸುವುದರಿಂದ ಗ್ರಿಡ್‌ಗಳಲ್ಲಿ ಅಸ್ಥಿರತೆ, ವೋಲ್ಟೇಜ್‌ನಲ್ಲಿ ವ್ಯತ್ಯಾಸ ಆಗಬಹುದೆಂದು ಆತಂಕಪಡುವ ಅಗತ್ಯವಿಲ್ಲ ಎಂದು ಇಂಧನ ಸಚಿವಾಲಯ ಸ್ಪಷ್ಟಪಡಿಸಿದೆ.

ಕೊರೊನಾ ವಿರುದ್ಧ ದೇಶ ಒಗ್ಗೂಡಿರುವುದರ ಸಂಕೇತವಾಗಿ ಏಪ್ರಿಲ್ 5ರಂದು ರಾತ್ರಿ 9ರಿಂದ 9:09ರ ವರೆಗೆ ಜನರು ಸ್ವಯಂಪ್ರೇರಿತರಾಗಿ ವಿದ್ಯುತ್ ದೀಪಗಳನ್ನು ಆರಿಸಿ ದೀಪ, ಮೇಣದ ಬತ್ತಿ, ಟಾರ್ಚ್‌ ಅಥವಾ ಮೊಬೈಲ್‌ ಫ್ಲ್ಯಾಶ್‌ಲೈಟ್‌ ಬೆಳಗುವಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕರೆ ನೀಡಿದ್ದರು. ಇದಕ್ಕೆ ಪ್ರತಿಪಕ್ಷಗಳ ನಾಯಕರು ಸೇರಿದಂತೆ ಅನೇಕರಿಂದ ಟೀಕೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಪ್ರಧಾನಿ ಮೋದಿ ವಿಡಿಯೊ ಸಂದೇಶ ಪ್ರಮುಖಾಂಶಗಳು: ದೀಪ ಬೆಳಗಿ ಒಗ್ಗಟ್ಟು ಪ್ರದರ್ಶಿಸಿ

‘ಅಪಾರ ಸಂಖ್ಯೆಯಲ್ಲಿ ಏಕ ಕಾಲದಲ್ಲಿ ವಿದ್ಯುತ್ ದೀಪಗಳನ್ನು ಆರಿಸಿ ಮತ್ತೆ ಏಕಾಏಕಿ ಬೆಳಗುವುದರಿಂದ ಗ್ರಿಡ್‌ಗಳಲ್ಲಿ ಅಸ್ಥಿರತೆ ಉಂಟಾಗಲಿದೆ. ವೋಲ್ಟೇಜ್‌ನಲ್ಲಿ ಏರಿಳಿತವಾಗಲಿದೆ ಎಂಬ ಸಂದೇಶ’ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಂತಹ ನೂರಾರು ಸಂದೇಶಗಳು ಟ್ವಿಟರ್‌ನಲ್ಲಿ ಪ್ರಕಟವಾಗಿದ್ದು, ಗ್ರಿಡ್ (#Grid) ಮತ್ತು ಅರ್ಥ್ ಅವರ್ (#EarthHour) ಎಂಬ ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್ ಆಗಿವೆ.

ಇದನ್ನು ಇಂಧನ ಸಚಿವಾಲಯ ತಳ್ಳಿ ಹಾಕಿದ್ದು, ಈ ಆತಂಕ ನಿಜವಲ್ಲ ಎಂದು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು