ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬದಲಾವಣೆ ಎಂದರೆ ಎಂಎನ್‌ಎಫ್‌, ಬಿಜೆಪಿ ಅಲ್ಲ’

Last Updated 22 ನವೆಂಬರ್ 2018, 19:16 IST
ಅಕ್ಷರ ಗಾತ್ರ

* ಗೆಲ್ಲುವ ಆತ್ಮವಿಶ್ವಾಸ ಯಾವ ಮಟ್ಟದಲ್ಲಿದೆ?
40 ಕ್ಷೇತ್ರಗಳ ಪೈಕಿ 25–30ರಲ್ಲಿ ನಾವು ಗೆಲ್ಲಬಹುದು. ಸರಳ ಬಹುಮತದಿಂದ ನಾವು ಸರ್ಕಾರ ರಚಿಸುವುದು ಖಚಿತ.

* 2008 ಮತ್ತು 2013ರಲ್ಲಿ ಸೋತಿದ್ದೀರಿ. ಈಗ ಮರಳಿ ಅಧಿಕಾರಕ್ಕೆ ಬರುವುದಕ್ಕೆ ಹೇಗೆ ಸಾಧ್ಯ?
ಮತದಾನದಲ್ಲಿ ಅಕ್ರಮ ಮತ್ತು ಮತಯಂತ್ರಗಳು ತಯಾರಾಗುವ ಹಂತದಲ್ಲಿಯೇ ಮಾಡಿರುವ ಬದಲಾವಣೆಗಳು ನಮ್ಮ ಸೋಲಿಗೆ ಕಾರಣ. ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷವೇ ಆದಿಕಾರದಲ್ಲಿ ಇದ್ದುದರಿಂದ ಮೀಜೋರಾಂಗಾಗಿಯೇ ಅವರು 1,500 ಮತಯಂತ್ರಗಳನ್ನು ತಯಾರಿಸಿದ್ದರು. 2008ರಲ್ಲಿ ಮೂರು ಮತ್ತು 2013ರಲ್ಲಿ ಐದು ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೆವು. 2014ರ ಲೋಕಸಭಾ ಚುನಾವಣೆಗೆ ಮೊದಲು ನಾವು ಹೈಕೋರ್ಟ್‌ಗೆ ದೂರು ನೀಡಿದ ಬಳಿಕ ಈ ವಿಶೇಷ ಮತಯಂತ್ರಗಳನ್ನು ವಾಪಸ್‌ ಪಡೆಯಲಾಯಿತು. ಈ ಬಾರಿ ಮತ ದೃಢೀಕರಣ ರಶೀದಿ ಯಂತ್ರವೂ ಇರುವುದರಿಂದ ಮೋಸ ಮಾಡುವುದು ಸಾಧ್ಯವಿಲ್ಲ. ಹತ್ತು ವರ್ಷಗಳಿಂದ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಹಾಗಾಗಿ ಆಡಳಿತ ವಿರೋಧಿ ಅಲೆಯ ನೆರವು ನಮಗೆ ಸಿಗಲಿದೆ. ಅರ್ಥ ವ್ಯವಸ್ಥೆ ಸುಧಾ
ರಿಸುವಲ್ಲಿ ಕಾಂಗ್ರೆಸ್‌ ದಯನೀಯವಾಗಿ ವಿಫಲವಾಗಿದೆ. ರಸ್ತೆಗಳು ಐಸಿಯುನಲ್ಲಿವೆ. ಮದ್ಯ ನಿಷೇಧ ತೆರವು ಮಾಡಿರುವುದರಿಂದ ಎನ್‌ಜಿಒಗಳು ಮತ್ತು ಚರ್ಚ್‌ಗಳು ಕಾಂಗ್ರೆಸ್‌ ವಿರುದ್ಧ ಇವೆ. ಗೃಹ ಸಚಿವ, ಇತರ ಕೆಲವು ಸಚಿವರು ಮತ್ತು ಸ್ಪೀಕರ್‌ ಸೇರಿ
ಕಾಂಗ್ರೆಸ್‌ನ ಹಲವು ಮುಖಂಡರು ಎಂಎನ್‌ಎಫ್‌ ಸೇರಿದ್ದಾರೆ. ನಮ್ಮ ಪರವಾದ ಅಲೆ ಇದೆ.

* ಮಿಜೋರಾಂನಲ್ಲಿ ಬದಲಾವಣೆ ಬಗ್ಗೆ ಬಿಜೆಪಿಯೂ ಮಾತನಾಡುತ್ತಿದೆ...
ಬದಲಾವಣೆ ಎಂದರೆ ಕಾಂಗ್ರೆಸ್‌ನಿಂದ ಎಂಎನ್‌ಎಫ್‌ಗೇ ಹೊರತು ಬಿಜೆಪಿಗೆ ಅಲ್ಲ. ಮೂರು ಕ್ಷೇತ್ರದಲ್ಲಿ ಗೆಲುವು ಸಿಕ್ಕರೆ ಅದೇ ಅವರ ಅದೃಷ್ಟ. ಯಾಕೆಂದರೆ, ಕ್ರೈಸ್ತರು ಬಹುಸಂಖ್ಯಾತರಾಗಿರುವ ರಾಜ್ಯದಲ್ಲಿ ಬಿಜೆಪಿ ಒಂದು ಸ್ಥಾನ ಗೆಲ್ಲುವುದೂ ಕಷ್ಟ.

* ಚುನಾವಣೆ ಬಳಿಕ ಬಿಜೆಪಿ ಜತೆ ಸೇರಿ ಎಂಎನ್‌ಎಫ್‌ ಮೈತ್ರಿ ಸರ್ಕಾರ ರಚಿಸಲಿದೆ ಎಂದು ಹಲವರು ಹೇಳುತ್ತಿದ್ದಾರಲ್ಲ...
ನಮಗೆ ಬಹುಮತ ಬರುವ ವಿಶ್ವಾಸ ಇದೆ. ಹಾಗಾಗಿ ಇಂತಹ ಸನ್ನಿವೇಶ ಸೃಷ್ಟಿಯಾಗುವುದೇ ಇಲ್ಲ. ನಮ್ಮ ಸಿದ್ಧಾಂತಗಳು ಭಿನ್ನ. ಹಾಗಾಗಿ ಬಿಜೆಪಿ ಜತೆ ಸೇರುವ ಪ್ರಶ್ನೆಯೇ ಇಲ್ಲ. ನಾವು ನೂರು ಶೇಕಡ ಕ್ರೈಸ್ತರು. ಬಿಜೆಪಿ ಹಿಂದುತ್ವದ ಪಕ್ಷ. ಯುಪಿಎ ಅಥವಾ ಕಾಂಗ್ರೆಸ್‌ ಸೇರಲು ಸಾಧ್ಯವೇ ಇಲ್ಲದ ಕಾರಣಕ್ಕೆ ನಾವು ಎನ್‌ಡಿಎ ಮತ್ತು ಎನ್‌ಇಡಿಎಗೆ ಸೇರಿದ್ದೇವೆ. ಅದೂ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರ. ರಾಜ್ಯದಲ್ಲಿ ನಾವು ಬಿಜೆಪಿ ಜತೆ ಕೆಲಸ ಮಾಡುವುದೇ ಇಲ್ಲ.

* ಎಂಎನ್‌ಎಫ್‌ಗೆ ಬಹುಮತಕ್ಕೆ ಕೊರತೆಯಾಗಿ ಬಿಜೆಪಿ ಕೆಲವು ಕ್ಷೇತ್ರಗಳನ್ನು ಗೆದ್ದರೆ ಆಗ ಏನು ಮಾಡುವಿರಿ?
ಇದೊಂದು ಕಾಲ್ಪನಿಕ ಪ್ರಶ್ನೆ. ನನ್ನ ಹೆಂಡತಿ ಆರೋಗ್ಯಯುತವಾಗಿ, ಜೀವಂತವಾಗಿ ಇರುವಾಗಲೇ ಆಕೆ ಸಾಯಬಹುದು ಎಂಬ ಅನುಮಾನದಲ್ಲಿ ಬೇರೊಬ್ಬಳನ್ನು ಹುಡುಕಿಕೊಳ್ಳುವ ಅಗತ್ಯ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT