ಸೋಮವಾರ, ಏಪ್ರಿಲ್ 6, 2020
19 °C

ಆರ್ಥಿಕ ಪರಿಸ್ಥಿತಿ: ಮೋದಿ ಸರ್ಕಾರಕ್ಕೆ ಮನಮೋಹನ್‌ ಸಿಂಗ್‌ ತರಾಟೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಆರ್ಥಿಕ ಪರಿಸ್ಥಿತಿ ವಿಷಯದಲ್ಲಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ‘ಈ ಸರ್ಕಾರವು ‘ಮಂದಗತಿ’ ಎಂಬ ಪದ ನಿಜವೆಂದು ಒಪ್ಪಿಕೊಳ್ಳುವುದಿಲ್ಲ. ಇದು ಅಪಾಯದ ವಿಚಾರ. ಸಮಸ್ಯೆಯನ್ನು ಗುರುತಿಸುವಲ್ಲೇ ವಿಫಲವಾದರೆ, ಅದಕ್ಕೆ ಉತ್ತರವನ್ನೂ ಹುಡುಕುವುದು ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ. 

ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯಾ ಅವರ ‘ಬ್ಯಾಕ್‌ಸ್ಟೇಜ್‌’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಂಗ್‌ ಮಾತನಾಡಿದರು. ‘ಅಹ್ಲುವಾಲಿಯಾ ಅವರು ಈ ಕೃತಿಯಲ್ಲಿ ಯುಪಿಎ ಸರ್ಕಾರ ದುರ್ಬಲ ಮತ್ತು ಗುಣಾತ್ಮಕ ಅಂಶಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ವಿಷಯಗಳು ಚರ್ಚೆಯಾಗಬೇಕು. ಏಕೆಂದರೆ, ಪ್ರಸ್ತುತ ಇರುವ ಸರ್ಕಾರವು ‘ಮಂದಗತಿ’ ಎಂಬ ಪದ ಇದೆ ಎನ್ನುವುದನ್ನೇ ಒಪ್ಪಿಕೊಳ್ಳುವುದಿಲ್ಲ. ಇದು ರಾಷ್ಟ್ರದ ಅಭಿವೃದ್ಧಿಗೆ ಮಾರಕ’ ಎಂದರು. 

‘ಆರ್ಥಿಕತೆ ಉದಾರೀಕರಣ ಸಂದರ್ಭದಲ್ಲಿ ಪಿ.ಚಿದಂಬರಂ, ಅಹ್ಲುವಾಲಿಯಾ ನನ್ನ ಬೆಂಬಲಕ್ಕೆ ಇದ್ದರು. ಹಲವು ವಿರೋಧಗಳು ಎದುರಾದರೂ ಹಲವು ಸುಧಾರಣೆಗಳನ್ನು ತರಲು ಇದು ಸಹಕಾರಿಯಾಯಿತು’ ಎಂದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು