ಭಾನುವಾರ, ಮೇ 31, 2020
27 °C

ಮೋದಿ ಚಹಾ ಮಾರಲಿಲ್ಲ, ಅದು ಜನರ ಅನುಕಂಪ ಗಿಟ್ಟಿಸಲು ಮಾಡಿದ ಗಿಮಿಕ್: ತೊಗಾಡಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಗ್ರಾ: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನನಗೆ 43 ವರ್ಷಗಳ ಗೆಳೆತನವಿತ್ತು. ನಾನು ಯಾವತ್ತೂ ಅವರು ಚಹಾ ಮಾರುವುದನ್ನು ನೋಡಿಲ್ಲ. ಜನರ ಅನುಕಂಪ ಗಿಟ್ಟಿಸುವುದಕ್ಕಾಗಿ ಅವರು ಗಿಮಿಕ್ ಮಾಡಿದ್ದಾರೆ ಎಂದು ಅಂತರರಾಷ್ಟ್ರೀಯ  ವಿಶ್ವ ಹಿಂದೂ ಪರಿಷತ್ ಮಾಜಿ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಇದೀಗ ಅಂತರ ರಾಷ್ಟ್ರೀಯ ಹಿಂದೂ ಪರಿಷತ್ ಮುಖ್ಯಸ್ಥರಾಗಿರುವ ತೊಗಾಡಿಯಾ, ಬಿಜೆಪಿ ಮತ್ತು ಆರ್‌ಎಸ್‍ಎಸ್‍ಗೆ ರಾಮ ಮಂದಿರ ನಿರ್ಮಿಸುವ ಯಾವ ಉದ್ದೇಶವೂ ಇದ್ದಂತಿಲ್ಲ ಎಂದಿದ್ದಾರೆ.
 ಮೋದಿಯವರ ಹೇಳಿಕೆ ನಂತರ  ಆರ್‍ಎಸ್ಎಸ್ ಮುಖ್ಯಸ್ಥಿ ಭಯ್ಯಾಜೀ  ಜೋಷಿ ಅವರು ಕೂಡಾ ಮುಂದಿನ ಐದು ವರ್ಷಗಳಲ್ಲಿ ರಾಮ ಮಂದಿರ ನಿರ್ಮಿಸುವುದಿಲ್ಲ ಎಂದು ಹೇಳಿದ್ದಾರೆ, ಬಿಜೆಪಿ ಮತ್ತು ಆರ್‍ಎಸ್‍ಎಸ್   125 ಕೋಟಿ ಭಾರತೀಯರನ್ನು ಕತ್ತಲಲ್ಲಿ ಇರಿಸಿದೆ. ಆದರೆ ದೇಶದ ಹಿಂದೂಗಳು ಈಗ ಎಚ್ಚೆತ್ತಿದ್ದಾರೆ.
ತ್ರಿವಳಿ ತಲಾಖ್ ಬಗ್ಗೆ ಕಾನೂನು ತರಲು ಮೋದಿ ಹಗಲು ರಾತ್ರಿ ಪ್ರಯತ್ನಿಸಿದ್ದರು, ಆದರೆ ರಾಮ ಮಂದಿರದ ವಿಷಯದಲ್ಲಿ ಇಂಥ ಯಾವುದೇ ಪ್ರಯತ್ನಗಳು ಕಾಣುತ್ತಿಲ್ಲ. 

ಎರಡನೇ ಬಾರಿ ಮೋದಿ ಆಯ್ಕೆಯಾದರೂ ಅವರು ರಾಮ ಮಂದಿರ ನಿರ್ಮಿಸುವುದಿಲ್ಲ. ಯಾಕೆಂದರೆ ಮಂದಿರ ನಿರ್ಮಾಣ ಸಮಸ್ಯೆ ಬಿಜೆಪಿ ಮತ್ತು ಆರ್‌ಎಸ್‍ಎಸ್‍ಗೆ ಅಗತ್ಯವಿರುವ ವಿಚಾರವಾಗಿದೆ. ಈ ವಿವಾದಕ್ಕೆ ಪರಿಹಾರ ಸಿಕ್ಕಿದರೆ ಈ ಎರಡು ಸಂಘಟನೆಗಳಿಗೆ ಹೇಳಲು ಯಾವುದೇ ವಿಷಯಗಳು ಉಳಿಯುವುದಿಲ್ಲ. ಹಾಗಾಗಿ ರಾಮ ಮಂದಿರ ನಿರ್ಮಾಣ ಸಂಗತಿಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಆರ್ಟಿಕಲ್ 35ಎ ಕೊನೆಗೊಳಿಸಲಾಗುವುದು. ಹೀಗೆ ಮಾಡಿದರೆ ದೇಶದಲ್ಲಿರುವ ಯಾರು ಬೇಕಾದರೂ ಅಲ್ಲಿ ಜಮೀನು ಖರೀದಿಸಬಹುದು. ಹಿಂದೂಗಳು ಅಲ್ಲಿ ಬಹು ಸಂಖ್ಯಾತರಾಗಿ ಸರ್ಕಾರ ರಚಿಸಬಹುದು. ಕಲ್ಲು ತೂರಾಟಗಾರರರಿಗೆ ಇದೊಂದು ಪಾಠವಾಗುತ್ತದೆ. 2019ರಲ್ಲಿ ಮೋದಿ ಪರಾಭವಗೊಂಡನಂತರ ಅವರು ಗುಜರಾತಿಗೆ ಮರಳಬೇಕಾಗುತ್ತದೆ ಮತ್ತು  ಭಯ್ಯಾಜೀ ಜೋಷಿ ನಾಗ್ಪುರಕ್ಕೆ ಮರಳಬೇಕಾಗುತ್ತದೆ ಎಂದಿದ್ದಾರೆ ತೊಗಾಡಿಯಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು