ಭಾರತದಲ್ಲಿರುವ ಭಾಷೆಗಳು 19,569

7

ಭಾರತದಲ್ಲಿರುವ ಭಾಷೆಗಳು 19,569

Published:
Updated:

ನವದೆಹಲಿ : ದೇಶದಲ್ಲಿ ಒಟ್ಟು 19,569 ಭಾಷೆಗಳು ಮತ್ತು ಉಪಭಾಷೆಗಳಿವೆ ಎಂದು 2011ರ ಜನಗಣತಿ ವರದಿ ಹೇಳಿದೆ. 10 ಸಾವಿರಕ್ಕಿಂತ ಹೆಚ್ಚು ಜನರು ಮಾತನಾಡುವ ಭಾಷೆಗಳ ಸಂಖ್ಯೆ 121.

ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗಿರುವ 22 ಭಾಷೆಗಳನ್ನು ಮಾತನಾಡುವವರ ಪ್ರಮಾಣ ಶೇ 96.71ರಷ್ಟಿದೆ. 

ತಾವು ಯಾವ ಭಾಷೆಯಲ್ಲಿ ವ್ಯವಹರಿಸುತ್ತಿದ್ದೇವೆ ಮತ್ತು ತಮ್ಮ ಮಾತೃಭಾಷೆ ಯಾವುದು ಎಂದು ಜನರು ಕೊಟ್ಟ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗಿದೆ. ಈ ಮಾಹಿತಿಯನ್ನು ಭಾಷಾಶಾಸ್ತ್ರೀಯವಾಗಿ ಸಮಗ್ರ ಪರಿಶೀಲನೆಗೆ ಒಳಪಡಿಸಿದ ಬಳಿಕ ಒಟ್ಟು ಭಾಷೆಗಳ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಈ ಪರಿಶೀಲನೆಯ ಬಳಿಕ 1,369 ಮಾತೃಭಾಷೆಗಳನ್ನು ಗುರುತಿಸಬಲ್ಲ ಭಾಷೆಗಳು ಎಂದು ವರ್ಗೀಕರಿಸಲಾಗಿದೆ. 1,474 ಭಾಷೆಗಳನ್ನು ಇತರ ಭಾಷೆಗಳು ಎಂದು ಗುರುತಿಸಲಾಗಿದೆ. 

ದೇಶದಲ್ಲಿ ಒಟ್ಟು 121 ಭಾಷೆಗಳ ಪೈಕಿ 22 ಭಾಷೆಗಳು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗಿವೆ. ಇವಲ್ಲದೆ 99 ಇತರ ಭಾಷೆಗಳಿವೆ. 2001ರ ಜನಗಣತಿ ಸಂದರ್ಭದಲ್ಲಿ ಇತರ ಭಾಷೆಗಳ ಸಂಖ್ಯೆ ನೂರು ಇತ್ತು. 2011ರ ಗಣತಿಯ ಹೊತ್ತಿಗೆ ಒಂದು ಭಾಷೆ ಕಡಿಮೆಯಾಗಿದೆ. 

10 ಸಾವಿರಕ್ಕಿಂತ ಹೆಚ್ಚು ಜನರು ಮಾತನಾಡುವ ಗುರುತಿಸಬಹುದಾದ 270 ಮಾತೃಭಾಷೆಗಳಿವೆ. ಇವುಗಳಲ್ಲಿ 123 ಮಾತೃಭಾಷೆಗಳನ್ನು 8ನೇ ಪರಿಚ್ಛೇದದಲ್ಲಿ ಸೇರಿದ ಭಾಷೆಗಳ ಗುಂಪಿಗೆ ಸೇರಿಸಲಾಗಿದೆ. ಉಳಿದ 147 ಮಾತೃಭಾಷೆಗಳನ್ನು ಪರಿಚ್ಛೇದದಲ್ಲಿ ಸೇರದ ಭಾಷೆಗಳ ಗುಂಪಿನಲ್ಲಿ ಗುರುತಿಸಲಾಗಿದೆ. 

ಹತ್ತು ಸಾವಿರಕ್ಕಿಂತ ಕಡಿಮೆ ಜನರು ಮಾತನಾಡುವ ಭಾಷೆಗಳನ್ನು ಇತರ ಭಾಷೆಗಳು ಎಂದು ಗುರುತಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !