ವಾಯು ಮಾಲಿನ್ಯ: ಭಾರತದ ನಗರಗಳಲ್ಲೇ ಹೆಚ್ಚು

ಬುಧವಾರ, ಮಾರ್ಚ್ 27, 2019
22 °C

ವಾಯು ಮಾಲಿನ್ಯ: ಭಾರತದ ನಗರಗಳಲ್ಲೇ ಹೆಚ್ಚು

Published:
Updated:

ಭಾರತದಲ್ಲಿ ವಾಯುಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದೆ. 2018ರಲ್ಲಿ ಜಗತ್ತಿನ ಅತಿಹೆಚ್ಚು ವಾಯುಮಾಲಿನ್ಯವಿದ್ದ 20 ನಗರಗಳ ಪೈಕಿ 15 ನಗರಗಳು ಭಾರತದಲ್ಲೇ ಇದ್ದವು. ನೆರೆಯ ಪಾಕಿಸ್ತಾನದ ಕೆಲವು ನಗರಗಳು ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಲಿನ ನಗರಗಳ ಪಟ್ಟಿಗೆ ಸೇರಿವೆ ಎಂದು ಗ್ರೀನ್‌ಪೀಸ್ ಆಗ್ನೇಯ ಏಷ್ಯಾ ಸಂಸ್ಥೆಯ ಅಧ್ಯಯನ ವರದಿ ಉಲ್ಲೇಖಿಸಿದೆ.  

ಮಾನದಂಡ ಮೀರಿದ ಮಾಲಿನ್ಯ: ಎಷ್ಟು ಪ್ರಮಾಣದ ಮಾಲಿನ್ಯ ಹಾನಿಕಾರಕ ಎಂಬ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ವಾಯುಗುಣಮಟ್ಟ ಮಾನದಂಡಗಳನ್ನು ರೂಪಿಸಿದೆ. ಅದರಂತೆ ಪಿ.ಎಂ 2.5 ಮಟ್ಟಕ್ಕಿಂತ ಹೆಚ್ಚಿದ್ದರೆ ಅದು ಆರೋಗ್ಯಕ್ಕೆ ಹಾನಿಕರ. ಗಾಳಿಯಲ್ಲಿರುವ ಪಿ.ಎಂ 2.5 ಮಟ್ಟದ ಕಣಗಳು ಸೂಕ್ಷ್ಮವಾಗಿದ್ದು, ಉಸಿರಾಟದ ವೇಳೆ ಸುಲಭವಾಗಿ ಶ್ವಾಸಕೋಶವನ್ನು ಸೇರಿಕೊಂಡು ಅಪಾಯ ತಂದೊಡ್ಡುತ್ತವೆ.

ಕಾರಣವೇನು?

ಮನೆ, ಕೈಗಾರಿಕೆ, ಕಾರು ಹಾಗೂ ಟ್ರಕ್‌ಗಳು ಹೊರಸೂಸುವ ಹೊಗೆಯಲ್ಲಿರುವ ಮಾಲಿನ್ಯಕಾರಕ ಕಣಗಳು. ಇವುಗಳಲ್ಲಿ ಹೆಚ್ಚಿನವು ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ತಜ್ಞರು ಹೇಳುವುದೇನು

ವಾಯುಮಾಲಿನ್ಯ ಕಡಿಮೆ ಮಾಡುವ ಹೇಳಿಕೆಗಳು ಕೇವಲ ರಾಜಕೀಯ ಹೇಳಿಕೆಯಷ್ಟೇ ಆಗಿ ಉಳಿಯುತ್ತವೆ ಎಂದು ಪರಿಸರ ತಜ್ಞರು ಬೇಸರ ವ್ಯಕ್ತಪಡಿಸುತ್ತಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಗಳು ಹಲ್ಲಿಲ್ಲದ ಹಾವುಗಳಾಗಿವೆ. ಪರಿಸರಸ್ನೇಹಿ ಕೈಗಾರಿಕೆಗಳು ಹಾಗೂ ಉತ್ತಮ ಇಂಧನ ಬಳಕೆಯಂತಹ ಕ್ರಮಗಳನ್ನು ಪ್ರೋತ್ಸಾಹಿಸುವುದು ಸದ್ಯಕ್ಕಿರುವ ಪರಿಹಾರ ಎನ್ನುತ್ತಾರೆ ತಜ್ಞರು.

ಅಧ್ಯಯನ: ಗ್ರೀನ್‌ಪೀಸ್ ಆಗ್ನೇಯ ಏಷ್ಯಾ ಸಂಸ್ಥೆ. ಆಧಾರ: ಪಿಟಿಐ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !