ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ತಾಯಂದಿರ ದಿನದಂದು ಅಮ್ಮನ ಸ್ಮರಿಸಿ, ಶುಭಾಶಯ ಕೋರಿದ ಗಣ್ಯರು

Last Updated 10 ಮೇ 2020, 6:21 IST
ಅಕ್ಷರ ಗಾತ್ರ

ಹಲವು ರಾಜಕೀಯ ನಾಯಕರು, ಸಿನೆಮಾ ತಾರೆಯರು ಮತ್ತು ಆಟಗಾರರು ಜನತೆಗೆ ವಿಶ್ವ ತಾಯಂದಿರ ದಿನದ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡುವ ಮೂಲಕ ತಾಯಂದಿರ ಪ್ರೀತಿ, ಮಮತೆ ಮತ್ತು ಕರುಣೆಯನ್ನು ನೆನಪಿಸಿಕೊಂಡಿದ್ದಾರೆ.

ಜನ್ಮ ನೀಡಿದವರ ಸೇವೆ ಮಾಡೋದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ ಎಂದಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, 'ಗುರು-ಹಿರಿಯರ ಗೌರವಿಸುವುದು, ತಂದೆ-ತಾಯಂದಿರ ಸೇವೆ ಮಾಡುವುದು ಭಾರತೀಯರ ಸಂಸ್ಕಾರ. ಅದೇನೇ ಕಷ್ಟ ಇದ್ದರೂ ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹುವ ಅಮ್ಮನೇ ಪ್ರತ್ಯಕ್ಷ ದೇವರು. ಏಳೇಳು ಜನ್ಮತಾಳಿದರೂ ಅಮ್ಮನ ಋಣ ತಿರಿಸಲಾಗದು. ಜನ್ಮ ನೀಡಿದವರ ಸೇವೆ ಮಾಡೋದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ. ಮಾತೃದೇವೋಭವ' ಎಂದು ಟ್ವೀಟಿಸಿದ್ದಾರೆ.

ಈ ದಿನ ಪ್ರೀತಿ, ಮಮತೆ, ತ್ಯಾಗಕ್ಕೆ ಈ ದಿನ ಸಂಕೇತ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, 'ಇಂದು ವಿಶ್ವ ತಾಯಂದಿರ ದಿನ. ಪ್ರೀತಿ, ಮಮತೆ, ತ್ಯಾಗಕ್ಕೆ ಈ ದಿನ ಸಂಕೇತ. ಆದರೆ ತಾಯ್ತನ ಅಜರಾಮರ. ನನ್ನ ವ್ಯಕ್ತಿತ್ವದ ಮೇಲೆ ನನ್ನಮ್ಮನ ಪ್ರಭಾವ ಗಾಢ. ಎಲ್ಲರನ್ನೂ ಪ್ರೀತಿಯಿಂದ ಕಾಣುವ, ಬಡವರಿಗೆ ಮರುಗುವ, ಕಷ್ಟಕ್ಕೆ ಕರಗುವ ಆಕೆಯ ಗುಣಗಳು ನನ್ನನ್ನು ರೂಪಿಸಿವೆ. ನನ್ನಮ್ಮನಿಗೆ ಹಾಗೂ ವಿಶ್ವದ ಮಾತೃ ಹೃದಯಗಳಿಗೆ ನನ್ನ ಶುಭಾಷಯ' ಎಂದು ತಿಳಿಸಿದ್ದಾರೆ.

ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ ಅಮ್ಮಾ ಎಂದಿರುವ ಕ್ರಿಕೆಟ್‌ ಆಟಗಾರ ಸುರೇಶ್‌ ರೈನಾ,'ನಿನ್ನ ಬೇಷರತ್ತಾದ ಪ್ರೀತಿ ಮತ್ತು ನೀನು ನನಗಾಗಿ ಮಾಡಿದ ಎಲ್ಲಾ ತ್ಯಾಗಗಳಿಗೆ ಧನ್ಯವಾದ ಹೇಳಲು ಯಾವುದೇ ಪದ ಸಾಲುವುದಿಲ್ಲ. ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ ಅಮ್ಮಾ! ನಿನಗೆ ತಾಯಂದಿರ ದಿನದ ಶುಭಾಶಯಗಳು' ಎಂದು ತಿಳಿಸಿದ್ದಾರೆ.

ವಿಶ್ವದ ಎಲ್ಲ ಅಮ್ಮಂದಿರಿಗೆ ಕಿಚ್ಚನ ಶುಭಾಶಯಗಳು ಎಂದು ತಿಳಿಸಿರುವ ನಟ ಸುದೀಪ್‌, 'ಜೀವ ಕೊಟ್ಟ ನನ್ನ ಹೆತ್ತ ತಾಯಿಗೆ, ಜೀವನ ಕೊಟ್ಟ ನನ್ನ ಕನ್ನಡ ತಾಯಿಗೆ, ಅನ್ನ ಕೊಟ್ಟ ಭೂತಾಯಿಗೆ, ತಮ್ಮ ಹೃದಯಗಳಲ್ಲಿ ಪ್ರೀತಿಯ ಸ್ಥಾನ ಕೊಟ್ಟು, ನನ್ನನ್ನು ಅಕ್ಕರೆಯಿಂದ ಬೆಳೆಸುತ್ತಿರುವ ಎಲ್ಲಾ ಮಾತೃಹೃದಯಿ ಸ್ವರೂಪ ಅಭಿಮಾನಿ ತಾಯಂದಿರಿಗೆ ನಾನು ಸದಾ ಋಣಿ. ವಿಶ್ವದ ಎಲ್ಲ ಅಮ್ಮಂದಿರಿಗೆ ಈ ಕಿಚ್ಚನ ಶುಭಾಶಯಗಳು' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT