ಗುರುವಾರ , ಏಪ್ರಿಲ್ 2, 2020
19 °C

ಕೋವಿಡ್‌–19 ಹೆಸರು ಬರಲು ಕಾರಣ ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚೀನಾದಲ್ಲಿ 2003ರಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್‌ ಮಹಾಮಾರಿಗೆ ಕಾರಣವಾಗಿದ್ದ ವೈರಸ್‌ನಿಂದಲೇ ಕೋವಿಡ್‌–19 ಕೂಡ ಹರಡುತ್ತಿದೆ. ಸಾರ್ಸ್‌ ವೈರಸ್‌ನಿಂದಲೇ ಬಂದ ಈ ಕಾಯಿಲೆಗೆ ಕೋವಿಡ್‌–19 ಎಂದು ಹೆಸರಿಟ್ಟಿರುವ ಹಿಂದೆ ಉದ್ದೇಶವೂ ಇದೆ. 

ಈ ಕಾಯಿಲೆಗೂ ಸಾರ್ಸ್‌ ಎಂದೇ ನಾಮಕರಣ ಮಾಡಿದರೆ ಏಷ್ಯಾದ ಜನರು ಹೆಚ್ಚು ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ. ಜನರ ನಡುವೆ ಅನಗತ್ಯ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಆದ್ದರಿಂದ ಕೋವಿಡ್‌–19 ಎಂದು ಹೆಸರಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಬರೆಯಲಾಗಿದೆ.

ಸಿವಿಯರ್‌ ಆ್ಯಕುಟ್‌ ರೆಸ್ಪಿರೇಟರಿ ಸಿಂಡ್ರೋಮ್‌ ಕೊರೊನಾ ವೈರಸ್‌–2 (severe acute respiratory syndrome coronavirus 2)  (ಸಾರ್ಸ್‌–ಕೊವಿ–2) ವೈರಾಣುವಿನಿಂದ ಸದ್ಯ ಕೋವಿಡ್‌ –19 ಹರಡುತ್ತಿದೆ. 

ಕೋವಿಡ್–19 ವಿಶ್ವದಾದ್ಯಂತ 5,800ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದು 1.50 ಲಕ್ಷ ಜನರು ಕೊರೊನಾ ವೈರಸ್ ರೋಗ ಪೀಡಿತರಾಗಿದ್ದಾರೆ.155 ದೇಶಗಳಲ್ಲಿ ಕೋವಿಡ್‌–19 ರೋಗವು ಪತ್ತೆಯಾಗಿದೆ.

2003 ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್‌ 811 ಜನರನ್ನ ಬಲಿ ಪಡೆದಿತ್ತು. 

ವಿಶ್ವ ಆರೋಗ್ಯೆ ಸಂಸ್ಥೆ ಮತ್ತು ಐಸಿಟಿಸಿ ಸಂಸ್ಥೆಗಳಿಗೆ ರೋಗ ಮತ್ತು ರೋಗಾಣುಗಳಿಗೆ ಹೆಸರು ನೀಡುವ ಅಧಿಕಾರ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು