ಶುಕ್ರವಾರ, ಅಕ್ಟೋಬರ್ 18, 2019
27 °C

ಗಾಂಧಿ ಜಯಂತಿಯಂದು ಟ್ವಿಟರ್‌ನಲ್ಲಿ ಗೋಡ್ಸೆ ಅಮರ್ ರಹೇ ಟ್ರೆಂಡಿಂಗ್

Published:
Updated:

ಬೆಂಗಳೂರುಗಾಂಧಿ ಜಯಂತಿ ಆಚರಣೆ ನಡೆಯುತ್ತಿರುವಾಗಲೇ  ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಅವರ ಪರ ವಹಿಸಿ ಟ್ವೀಟಿಗರು ಗೋಡ್ಸೆ ಅಮರ್ ರಹೇ  (ಗೋಡ್ಸೆ ಅಮರ) ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

ಟ್ಟಿಟರ್‌ನಲ್ಲಿ ಬೆಳಗ್ಗಿನಿಂದ ಸಂಜೆ 5 ಗಂಟೆಯವರೆಗೂ #GandhiJayanti #GandhiAt150 ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿದ್ದವು.  ಸಂಜೆ 5 ಗಂಟೆಯ ನಂತರ #गोडसे_अमर_रहें   ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದ್ದು  6.45ರ ಹೊತ್ತಿಗೆ ಇದು ಟ್ರೆಂಡಿಂಗ್ ಪಟ್ಟಿಯ ಮೊದಲ ಸ್ಥಾನದಲ್ಲಿದೆ.

ಗೋಡ್ಸೆ ಅಮರ್ ರಹೇ ಟ್ರೆಂಡಿಂಗ್ ಯಾಕೆ? 
ಗಾಂಧೀಜಿಯ ನಿರ್ಧಾರಗಳು  ದೇಶಕ್ಕೆ ಒಳಿತಾಗಿರಲಿಲ್ಲ. ಗೋಡ್ಸೆ ಗಾಂಧಿಯನ್ನು ಕೊಲ್ಲಬಾರದಿತ್ತು ಎಂದು ನಾನು ಬಯಸುತ್ತೇನೆ. ಆದರೆ ದೇಶಕ್ಕಾಗಿ ಗೋಡ್ಸೆ ಗಾಂಧಿಯನ್ನು  ಹತ್ಯೆ ಮಾಡಿದ. ತಮ್ಮ ತತ್ವಗಳು ಕಾರ್ಯ ಪ್ರವೃತ್ತವಾಗದಿದ್ದರೂ ಗಾಂಧಿ ದೇಶದ ಒಳಿತು ಬಯಸಿದ್ದರು ಎಂದು ಅನಿರುದ್ದ್ ಗಾರ್ಗ್ ಎಂಬ ಟ್ವೀಟಿಗ #गोडसे_अमर_रहें  ಎಂದು ಟ್ವೀಟಿಸಿದ್ದಾರೆ. 

  ಗೋಡ್ಸೆ ಉಗ್ರನೂ ಆಗಿರಲಿಲ್ಲ, ದೇಶಭಕ್ತನೂ ಆಗಿರಲಿಲ್ಲ. ಅವನೊಬ್ಬ ಹೊಟ್ಟೆಕಿಚ್ಚಿನ ಮೂರ್ಖ. ಹಿಂದೂಗಳನ್ನು ರಕ್ಷಣಾತ್ಮಕ ಭಾಗವಾಗಿಟ್ಟು ತಪ್ಪಿಸ್ಥರಂತೆ ಮಾಡಿದ. 3 ದಶಕಗಳ  ಕಾಲ ನೆಹರೂ ಕುಟುಂಬ ರಾಜಕಾರಣ ಮಾಡುವಂತೆ ಮಾಡಿದ ಎಂಬುದನ್ನು #गोडसे_अमर_रहें ಟ್ರೆಂಡ್ ಮಾಡುವವರು ಗಮನಿಸಿ ಎಂದು ರಿಷಿ ಬಾಗ್ರೀ ಎಂಬವರು  ಟ್ವೀಟಿಸಿದ್ದಾರೆ. 

Post Comments (+)