ಮಂಗಳವಾರ, ಜನವರಿ 28, 2020
21 °C

ನೇಪಾಳದವರಂತೆ ಕಾಣುತ್ತಿದ್ದೀರಿ ಎಂಬ ಕಾರಣ ನೀಡಿ ಪಾಸ್‌ಪೋರ್ಟ್ ಅರ್ಜಿ ತಿರಸ್ಕೃತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Passport

ಅಂಬಾಲ: ಹರ್ಯಾಣ ಮೂಲದ  ಸಂತೋಷ್ ಮತ್ತು ಸುಷ್ಮಾ ಎಂಬ ಸಹೋದರಿಯರು ಪಾಸ್‌ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ ಪಾಸ್‌ಪೋರ್ಟ್ ಕಚೇರಿಯ ಸಿಬ್ಬಂದಿ ಈ ಸಹೋದರಿಯರು 'ನೇಪಾಳದವರಂತೆ ಕಾಣುತ್ತಿದ್ದಾರೆ' ಎಂಬ ಕಾರಣ ನೀಡಿ ಪಾಸ್‌ಪೋರ್ಟ್ ಅರ್ಜಿ ತಿರಸ್ಕರಿಸಿರುವ ಘಟನೆ ನಡೆದಿದೆ. 

ಪಾಸ್‌ಪೋರ್ಟ್ ಪಡೆಯುವುದಕ್ಕಾಗಿ ಈ ಸಹೋದರಿಯರು ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ ಈ ದಾಖಲೆಗಳನ್ನು ಪರಿಶೀಲಿಸುವ ಮುನ್ನವೇ ಮುಖ ನೋಡಿ ನೀವು ನೇಪಾಳದವರಂತೆ ಕಾಣುತ್ತಿದ್ದೀರಿ ಎಂದು ಪಾಸ್‌ಪೋರ್ಟ್ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಅಲ್ಲಿನ ಅಧಿಕಾರಿಗಳು.
 
ಇದಾದ ನಂತರ ಈ ಸಹೋದರಿಯರು ಹರ್ಯಾಣದ ಮುಖ್ಯಮಂತ್ರಿ ಅನಿಲ್ ವಿಜ್ ಅವರ ನಿವಾಸಕ್ಕೆ ತೆರಳಿ ಪಾಸ್‌ಪೋರ್ಟ್  ಕಚೇರಿಯಲ್ಲಿ ನಡೆದ ಘಟನೆ ವಿವರಿಸಿದ್ದಾರೆ. ಸಹೋದರಿಯರ ದೂರು ಆಲಿಸಿದ ಮುಖ್ಯಮಂತ್ರಿ ಈ ಬಗ್ಗೆ  ತನಿಖೆ ನಡೆಸುವಂತೆ ಹೆಚ್ಚುವರಿ ಆಯುಕ್ತ ಅಶೋಕ್ ಶರ್ಮಾ ಅವರಿಗೆ ಆದೇಶಿಸಿದ್ದಾರೆ. 

ದಾಖಲೆಗಳನ್ನು ಪರಿಶೀಲಿಸದೆ ಸಹೋದರಿಯರ ಮುಖ ನೋಡಿ 'ರಾಷ್ಟ್ರೀಯತೆ' ಅಳೆದ ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿಗಳನ್ನು ಅಶೋಕ್ ಶರ್ಮಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಾದ ನಂತರ ಸಹೋದರಿಯರಿಗೆ ಪಾಸ್‌ಪೋರ್ಟ್ ನೀಡಲು ಸಿದ್ಧತೆ ಮಾಡಲಾಗಿದೆ.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು